ಮಧ್ಯದ ಅಂಗಡಿ ಆರಂಭ ಬೇಡ- ಗೋಪಾಲರೆಡ್ಡಿ

ರಾಯಚೂರು,ಅ.೦೮- ರಾಜ್ಯದಲ್ಲಿ ಒಂದು ಸಾವಿರಕ್ಕೂ ಅಧಿಕ ಬಾರ್ ಶಾಪ್ ತೆರೆಯಲು ರಾಜ್ಯ ಸರಕಾರ ಮುಂದಾಗಿರುವುದನ್ನು ಖಂಡಿಸಿ ಲೋಕ ಜನಶಕ್ತಿ ಜಿಲ್ಲಾಧ್ಯಕ್ಷರಾದ ಜಿ. ಗೋಪಾಲರೆಡ್ಡಿ ಅವರು ತೀವ್ರವಿರೋಧ ವ್ಯಕ್ತಪಡಿಸಿದ್ದಾರೆ.
ಮುಂಗಾರು ವೈಫಲ್ಯದಿಂದ ರಾಜ್ಯ ಸಂಪೂರ್ಣ ಈಗ ಬರದಿಂದ ತತ್ತಾರಿಸಿದೆ. ಈ ಹಿನ್ನಲೆಯಲ್ಲಿ ಬಾರ್ ಅನುಮತಿ ನಿರ್ಧಾರ ಸರಿಯಲ್ಲ ಎಂದು ಕಿಡಿಕಾಡಿದರು. ಅಗತ್ಯ ಪದಾರ್ಥಗಳ ಬೆಲೆ ಏರಿಕೆಯಿಂದ ಬಡ ಜನರು ಕುಟುಂಬ ನಿವಾರಣೆಗೆ ಸಮಸ್ಯೆಯಾಗಿದೆ. ರಾಜ್ಯದ ಬೊಕ್ಕಸಕ್ಕೆ ತುಂಬಲು ಬಾರ್ ಆರಂಭಕ್ಕೆ ಅನುಮತಿ ನೀಡಲು ಮುಂದಾದರೆ ಬಡ ಹಾಗೂ ಮಧ್ಯಮ ವರ್ಗದ ಜನತೆ ಬೀದಿಪಾಲಾಗಲಿದ್ದಾರೆ ಎಂದರು.
ಬಾರ್ ಸ್ಥಾಪನೆ ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.ಯುವಕರು ಕುಡಿತಕ್ಕೆ ಬಲಿಯಾಗುತ್ತಾರೆ. ಮಧ್ಯದ ಅಂಗಡಿ ಆರಂಭದಿಂದ ಮಹಿಳೆಯರಿಗೆ ಕಿರುಕುಳ ಮತ್ತು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತಾರೆ. ಸರಕಾರ ರಾಜ್ಯದ ಜನತೆಯನ್ನು ಆರ್ಥಿಕ ಸಂಕಷ್ಟಕ್ಕೆ ತಲ್ಲಬಾರದು. ಮಧ್ಯದ ಅಂಗಡಿ ಆರಂಭಕ್ಕೆ ಅನುಮತಿ ನೀಡಬಾರದೆಂದು ರಾಜ್ಯ ಸರಕಾರ ಎಚ್ಚರಿಕೆ ನೀಡಿದರು.