ಮಧ್ಯಂತರ ಆದೇಶದಂತೆ ಪ್ರಕರಣ ಇತ್ಯರ್ಥಗೊಳಿಸಲು ನೀರಲಕೇರಿ ಆಗ್ರಹ

ಧಾರವಾಡಮೇ.5 : ರಾಜ್ಯ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶದಂತೆ ನೌಕರರ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ವಾಕರಾರ ಸಂಸ್ಥೆಯ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್.ನೀರಲಕೇರಿ ವಾಕರಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಲ್ಲಿ ಮನವಿ ಮಾಡಿದರು. ಅವರು ಹುಬ್ಬಳ್ಳಿಯ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭಾಜಪೇಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇತ್ತೀಚೆಗೆ ಸಾರಿಗೆ ಸಂಸ್ಥೆಯ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಸಂಸ್ಥೆಯು ಕೆಲವು ನೌಕರರನ್ನು ವರ್ಗಾವಣೆ , ಅಮಾನತ್ತು ಮತ್ತು ವಜಾ ಮಾಡಿತ್ತು.ಈ ಕುರಿತು ರಾಜ್ಯದ ಹೈಕೋಟ್9 ನೌಕರರ ಪ್ರಕರಣಗಳನ್ನು ಆಯಾ ಹಂತದಲ್ಲಿ ಇತ್ಯರ್ಥ ಗೊಳಿಸಲು ಮೇಲ್ಮನವಿ ಸಲ್ಲಿಸಿ ಬಗೆಹರಿಸಿಕೊಳ್ಳಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು.ಆದ್ದರಿಂದ ನೌಕರರ ಎಲ್ಲ
ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಬೇಕು.ಹಾಗೂ ನೌಕರರ ಸಮಸ್ಯೆಗಳನ್ನು ನೇರವಾಗಿ ಘಟಕಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಮುಷ್ಕರ ಮುಗಿದು ಕೋರ್ಟ ಮಧ್ಯೆ ಪ್ರವೇಶದ ನಂತರವೂ ಕೂಡ ಸಂಸ್ಥೆ ನೌಕರರ ಮೇಲೆ ಶಿಸ್ತುಕ್ರಮ ಕೈಗೊಳ್ಳುತ್ತಿದೆ. ಅದನ್ನು ತಕ್ಷಣ ನಿಲ್ಲಸಬೇಕು ಎಂಬ ಮನವಿಗೆ ವ್ಯವಸ್ಥಾಪಕ ನಿರ್ದೇಶಕರು ಸಕರಾತ್ಮಕವಾಗಿ ಸ್ಪಂದಿಸಿದರು.