ಮಧುರ ಮೈತ್ರಿ ಮಹಿಳಾ ಮಂಡಳದಿಂದ ಪಗಡೆ ಆಟ

ಕಲಬುರಗಿ,ನ.18: ಇಂದಿನ ಆಧುನಿಕ ಯುಗದಲ್ಲಿ ಮೊಬೈಲ್ ,ಕಂಪ್ಯೂಟರ್‍ಹಾವಳಿಯಲ್ಲಿ ನಶಿಸಿ ಹೋಗುತ್ತಿರುವ ಪಗಡೆ ಆಟ ಉಳಿಸಿ ಬೆಳೆಸಲು ಜಯತೀರ್ಥನಗರದ ಮಹಿಳೆಯರು ಪ್ರಯತ್ನಿಸುತ್ತಿದ್ದಾರೆ.ದೀಪಾವಳಿ ಸಂದರ್ಭದಲ್ಲಿ ಹದಿನೈದು ದಿನಗಳವರೆಗೆ ಬಡಾವಣೆಯ ಒಬ್ಬೊಬ್ಬರ ಮನೆಗಳಲ್ಲಿ ಪಡಗೆ ಆಟ ಆಡುವ ಮೂಲಕ ಪುರಾತನ ಸಂಸ್ಕøತಿ ಉಳಿಸುತ್ತಿರುವ ಕಾರ್ಯ ಅವರು ಮಾಡುತ್ತಿರುವುದು ಶ್ಲಾಘನೀಯವಾಗಿದೆ.
ದ್ವಾಪರ ಯುಗದಲ್ಲಿ ಪಗಡೆ ಆಟ ಪ್ರಸಿದ್ಧಿ ಪಡೆದುಕೊಂಡಿತ್ತು.ಕೌರವರ ಪಕ್ಷದಲ್ಲಿದ್ದ ಶಕುನಿಯು ಪಗಡೆ ಆಟದಲ್ಲಿ ಮೋಸದಿಂದ ಪಾಂಡವರನ್ನುಸೋಲಿಸಿದ್ದು ಇತಿಹಾಸದಿಂದ ತಿಳಿದು ಕೊಳ್ಳಬಹುದಾಗಿದೆ. ಅಂದಿನ ಕಾಲದಲ್ಲಿ ಪಗಡೆ ಆಟವನ್ನು ಮನರಂಜನೆಗಾಗಿ ಆಡುತ್ತಿದ್ದರು.ಇತ್ತೀಚಿನ ತಾಂತ್ರಿಕ ಯುಗದಲ್ಲಿ ಪಗಡೆ ಆಟ ಕಣ್ಮರೆಯಾಗುತ್ತಿದೆ.ಯುವ ಪೀಳಿಗೆಗೆ ಪಗಡೆ ಆಟದ ನಿಯಮಗಳನ್ನು ಕಲಿಸಿವ ಅಗತ್ಯವಿದೆ.ಮಧುರ ಮೈತ್ರಿ ಮಹಿಳಾ ಮಂಡಳದ ಅಧ್ಯಕ್ಷೆ ಜ್ಯೋತಿ ಲಾತೂರಕರ, ರಮಾಬಾಯಿ ಜೋಶಿ, ಭಾಗ್ಯ ಕರಣಂ,ಚಂದ್ರಕಲಾ ಮೋಹರಿರ,ಅರುಂಧತಿ ಜಾಗಿರದಾರ, ವೀಣಾ ಕುಲಕರ್ಣಿ, ವನಿತಾ ಮಾಲಗತ್ತಿ, ಸುರೇಖಾ ಮುಜುಂದಾರ, ಕವಿತಾ ದೀಕ್ಷಿತ, ಶಾಮಲಾ ಟಕ್ಕಳಕಿ, ರೋಹಿಣಿ ಸೇರಿದಂತೆ ಬಡಾವಣೆ ಮಹಿಳೆಯರುಪಗಡೆ ಆಟದಲ್ಲಿ ಭಾಗವಹಿಸಿದರು.