ಆಯುರ್ವೇದ ಚಿಕಿತ್ಸಾ ಪದ್ದತಿ ಮಹತ್ವ ಸಾರುವ “ ಮಧುರ ಕಾವ್ಯ” ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಆಯುರ್ವೇದ ತಜ್ಞರೂ ಆಗಿರುವ ಮದುಸೂಧನ್,ನಿರ್ದೇಶನ ಮಾಡುವ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರ ಬಿಡುಗಡೆಗೆ ಸಜ್ಜಾಗಿದೆ.ಚಿತ್ರದಲ್ಲಿ ನಾಯಕಿ ಇಲ್ಲ. ನಾಯಕನ ತಾಯಿ ಪಾತ್ರದಲ್ಲಿ ರಂಗಭೂಮಿ ನಟಿ ಯಶೋ ಕಾಣಿಸಿಕೊಂಡಿದ್ದಾರೆ. ಆಡಿಯೋ ಬಿಡುಗಡೆ ಮಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್ ಚಿತ್ರಕ್ಕೆ ಶುಭಕೋರಿದರು.
ನಿರ್ದೇಶಕ ಮಧುಸೂದನ್ ಮಾತನಾಡಿ ,ಸಿನಿಮಾ ನನ್ನ ಕನಸು ವ್ಯಾಪಾರಕ್ಕಾಗಿ ಚಿತ್ರ ಮಾಡಿಲ್ಲ. ಸಂದೇಶ ಕೊಡುವುದು ನಮ್ಮ ಉದ್ದೇಶ. ಹಣ ಮಾಡಬೇಕೆಂದರೆ ಚಿತ್ರ ಮಾಡಬೇಕಾಗಿಲ್ಲ.ಸಾವಿರಾರು ಜನ ರೋಗಿಗಳನ್ನು ನೋಡಿದ್ದೇನೆ .ಮಾಡುತ್ತಿರುವ ಸೇವೆ ಸಿನಿಮಾ ಮಾಡಲು ಸ್ಪೂರ್ತಿ. ಬಹುತೇಕ ಖಾಯುಲೆಗಳಿಗೆ ಹಿತ್ತಲಲ್ಲೇ ಔಷಯಿದೆ. ಹಿತ್ತಲಗಿಡವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವದನ್ನು ಚಿತ್ರದ ಮೂಲಕ ಹೇಳಲಾಗಿದೆ ಎಂದರು.
ಪಾರಂಪರಿಕವಾಗಿ ಜನಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ಅಲೋಪತಿಯವರು ಯಾವರೀತಿ ತುಳಿಯುತ್ತಿದ್ದಾರೆ. ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ.ಲಾಭಿ ನಡೆಸುವವರ ವಿರುದ್ದ ಹೋರಾಟ ನಡೆಸಿ ನಾಟಿ ವೈದ್ಯ ಪದ್ದತಿ ರಕ್ಷಿಸುವ ಕಥೆ ಇದೆ. ಚಿತ್ರದಲ್ಲಿ ತಾಯಿ, ಮಗನ ನಡುವಿನ ಪ್ರೀತಿ ವಾತ್ಸಲ್ಯದೆವಿದೆ ಎಂದು ಮಾಹಿತಿ ಹಂಚಿಕೊಂಡರು.
ಉಡುಪಿ, ಮಂಗಳೂರು, ಶಿರಸಿ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಗ್ರಾಮೀಣ ಭಾಗದ ನಾಟಿವೈದ್ಯರ ಕುಟುಂಬ ಮೆಡಿಕಲ್ ಲಾಭಿಯ ವಿರುದ್ದ ಹೋರಾಡುವ ಕಥೆ ಇದರಲ್ಲಿದೆ. ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದರು. ಸಂಗೀತ ನಿರ್ದೇಶಕ ಸತೀಶ್ ಮೌರ್ಯ, ಚಿತ್ರದಲ್ಲಿ ನಟಿಸಿರುವ ರಾಜಕುಮಾರ್ ನಾಯಕ್, ನಾಚಪ್ಪ, ಬಸವರಾಜ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.