“ಮಧುರಚೆನ್ನ ಕಾವ್ಯ ಪ್ರಶಸ್ತಿ”ಗೆ ಆರನಕಟ್ಟೆ ಕವನ ಸಂಕಲನ ಆಯ್ಕೆ

ವಿಜಯಪುರ,ಡಿ.4-ಹಲಸಂಗಿಯ ಮಧುರಚೆನ್ನ ಪ್ರತಿಷ್ಠಾನ ನೀಡುವ 2021ನೇ ಸಾಲಿನ “ಮಧುರಚೆನ್ನ ಕಾವ್ಯ ಪ್ರಶಸ್ತಿ”ಗೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಆರನಕಟ್ಟೆ ರಂಗನಾಥ ಅವರ ” ಕಾರುಣ್ಯದ ಮೋಹಕ ನವಿಲುಗಳೆ” ಕವನ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಯು 10 ಸಾವರ ರೂ.ನಗದು ಮತ್ತು ಫಲಕವನ್ನು ಒಳಗೊಂಡಿದೆ ಎಂದು ಹಲಸಂಗಿಯ ಮಧುರಚೆನ್ನ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.