ಮಧುಮೇಹ ಸುಸ್ಥಿರತೆಗೆ ಆಹಾರ ಕ್ರಮ ಅವಶ್ಯ

ಗಂಗಾವತಿ ನ.22: ಮಧುಮೇಹ ಸುಸ್ಥಿರತೆಗೆ ನಿತ್ಯದ ಆಹಾರ ಕ್ರಮ ಹಾಗೂ ದೈಹಿಕ ಶ್ರಮ ಅವಶ್ಯವಾಗಿದೆ ಎಂದು ಯಶೋಧ ಆಸ್ಪತ್ರೆಯ ಡಾ.ಸತೀಶರಾಯ್ಕರ್ ಹೇಳಿದರು.
ನಗರದ ಸರ್ಕಾರಿ ಬಾಲಕರ ಜ್ಯೂನಿಯರ್ ಕಾಲೇಜ್ ಆವರಣದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಉಚಿತ ಮಧುಮೇಹ ಪರೀಕ್ಷೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕಾಗಿದ್ದು, ಕಾಲಕಾಲಕ್ಕೆ ಮಧುಮೇಹ ಹಾಗು ರಕ್ತದೊತ್ತಡವನ್ನು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ. ಮಾನಸಿಕ ಒತ್ತಡದ ನಡುವೆ ಮಧುಮೇಹ ಕಾಯಿಲೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಎಲ್ಲರೂ ಸಾಧ್ಯವಾದಷ್ಟು ಮುಂಜಾಗ್ರತೆ ವಹಿಸಿ ಮಧುಮೇಹವನ್ನು ಸುಸ್ಥಿರತೆಯಲ್ಲಿಡಬೇಕು. ಮಧುಮೇಹವನ್ನು ನಿಯಂತ್ರಣಕ್ಕಾಗಿ ಟ್ಯಾಬ್ಲೇಟ್ ಹಾಗೂ ಇನ್‍ನ್ಸುಲಿನ್ ಬಳಸಬಹುದು ಎಂದರು.
ಲಯನ್ಸ ಕ್ಲಬ್ ಅಧ್ಯಕ್ಷ ಡಿ.ಎಂ.ಅಭಿಷೇಕ್ ಮಾತನಾಡಿ, ಪ್ರತಿ ವರ್ಷವು ಲಯನ್ಸ್ ಕ್ಲಬ್‍ನಿಂದ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದ್ದು, ಉಚಿತವಾಗಿ ಪರೀಕ್ಷೆ ಹಮ್ಮಿಕೊಳ್ಳಲಾಗುವುದು. ಈಗಾಗಲೇ ನೂರಕ್ಕು ಹೆಚ್ಚು ಮಧುಮೇಹ ಪರೀಕ್ಷೆ ನಡೆಸಲಾಗಿದೆಎಂದರು.
ಲಯನ್ಸ್ ಕಾರ್ಯದರ್ಶಿ ಡಾ.ಅಮರೇಶ ಪಾಟೀಲ್, ಖಜಾಂಚಿ ಸತೀಶ ಭೋಜಶೆಟ್ಟರ್, ಲ್ಯಾಬ ಟೆಕ್ನಿಷಿಯನ್ ಜಗದೀಶ್, ಪ್ರಭು, ಪ್ರಭುಚೌಹಾನ್ ಇತರರಿದ್ದರು.