ಮಧುಮೇಹ ರೋಗಿಗಳಿಗೆ ಇರಲಿ ಆಹಾರದ ಕಾಳಜಿ


ಭರಮಸಾಗರ.ನ.೨೫: ಮಧುಮೇಹ ರೋಗಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ ಎಂದು ಕಾಲ್ಗರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್‌‌ ಆಧಿಕಾರಿ ವಿ.ಲೋಕೇಶ್ ತಿಳಿಸಿದರು.
ಅವರು  ಕಾಲ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಪಟ್ಟಣದ ಶ್ರೀ ಓಂಕಾರ ಯೋಗ ಕೇಂದ್ರದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ಇರುವ ರೋಗಿಗಳಿಗಾಗಿ ಆಯೋಜಿಸಿದ್ದ  ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ತಿಪ್ಪೇಸ್ವಾಮಿ ಮಾತನಾಡಿ ” ಮಧುಮೇಹ ಹಾಗೂ ರಕ್ತದೊತ್ತಡ ಖಾಯಿಲೆಗೆ ಮಾತ್ರೆ, ಔಷಧಿಗಳೇ ಪರಿಹಾರವಲ್ಲ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳಬೇಕು, ಪ್ರತದಿನ ತಪ್ಪದೆ ವಾಕಿಂಗ್, ಲಘು ವ್ಯಾಯಾಮ ಮಾಡುವುದು ಒಳ್ಳೆಯದು ” ಎಂದು ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ಕಾಲ್ಗೆರೆ ವೈದ್ಯಾಧಿಕಾರಿ ಡಾ. ಶ್ರೀಧರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧ ರೋಗಿಗಳ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸಿಬ್ಬಂದಿಗಳ ಜೊತೆಗೆ ಮುಖಂಡರಾದ ಶ್ರೀಮತಿ ಪುಷ್ಪ, ನಿರ್ಮಲ, ಲಕ್ಷ್ಮಿ, ಶಾರದಮ್ಮ, ಶಿಲ್ಪಾ, ವನಿತಾ, ರಾಜಣ್ಣ, ಪರಶುರಾಮ್, ಶಂದಿಲ್, ರುದ್ರಪ್ಪ, ಹಾಗೂ ಇತರರು ಇದ್ದರು.

Attachments area