ಮಧುಮತಿಯವರ ಕಾರ್ಯ ಇತರರಿಗೆ ಮಾದರಿಯಾಗಲಿ:ಅಲ್ಲಿಪೂರ

ಸೈದಾಪುರ:ಫೆ.27:ಕಂದಕೂರ ಶಾಲೆಯ ಶಿಕ್ಷಕಿ ಮಧುಮತಿ ಶೈಕ್ಷಣಿಕ ಅಭಿವೃದ್ಧಿಗಾಗಿ ಅವರು ಮಾಡುತ್ತಿರುವ ಸೇವಾ ಮನೋಭಾವನೆಯ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದು ಸೈದಾಪುರ ಪ್ರಜ್ಞಾ ಕೈಗಾರಿಕಾ ತರಬೇತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.

ಸಮೀಪದ ಕಂದಕೂರ ಸರಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನಿ ಶಿಕ್ಷಕಿ ಮಧುಮತಿಯವರು ಸ್ವಂತ ಹಣದಲ್ಲಿ ಸೈನ್ಸ್ ಲ್ಯಾಬ ಕಟ್ಟಿದ್ದಕ್ಕಾಗಿ ಅವರನ್ನು ಪ್ರೌಢ ಶಾಲೆಯ ಹಳೆ ಗೆಳೆಯರ ಬಳಗದಿಂದ ಸನ್ಮಾನಿಸಿ ಮಾತನಾಡಿದರು. ವೃತ್ತಿಯ ಬದುಕಿನೊಂದಿಗೆ ತಮ್ಮಿಂದ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರಯತ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರೌಢ ಶಾಲೆಯಲ್ಲಿ ನಮ್ಮೊಂದಿಗೆ ಕಲಿತ ಸಹಪಾಠಿಯ ಈ ಕಾರ್ಯ ನಮಗೆ ಹೆಮ್ಮಯನ್ನುಂಟು ಮಾಡುವಂತಾಗಿದೆ ಎಂದು ಹೇಳಿದರು. ಗೆಳಯರ ಬಳಗದ ಪರಶುರಾಮ, ಸ್ವಾತಿ, ಅಶ್ವಿನಿ, ಮಲ್ಲಿಕಾರ್ಜುನ ಕಡೇಚೂರು, ಶಿವಕುಮಾರ, ಶಿಕ್ಷಕರಾದ ನಾಗಪ್ಪ, ರಾಧ ಸೇರಿದಂತೆ ಇತರರಿದ್ದರು.

ನಾನು ಮಾಡಿದ ಕಾರ್ಯವನ್ನು ಮೆಚ್ಚಿ ಪ್ರೌಢ ಶಾಲೆಯ ನನ್ನ ಹಳೆಯ ಗೆಳೆಯರು ಗೌರವಿಸಿರುವುದು ಜವಾಬ್ದಾರಿ ಇನ್ನೂ ಹೆಚ್ಚಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿಯೂ ಈ ವಿದಧ ಸಹಕಾರ ತಮ್ಮಿಂದ ಇರಲಿ.

                     ಮಧುಮತಿ ಸ.ಪೌ.ಶಾ.ವಿಜ್ಞಾನ ಶಿಕ್ಷಕಿ ಕಂದಕೂರ