ಮಧುಗೆ ಮಂತ್ರಿ ಸ್ಥಾನಗೀತಾ ವಿಶ್ವಾಸ

ಬೆಂಗಳೂರು,ಮೇ.೧೪- ನನ್ನ ತಮ್ಮ ಮಧು ಬಂಗಾರಪ್ಪ ಸಚಿವನಾಗುತ್ತಾನೆ ಎಂದು ಗೀತಾ ಶಿವರಾಜ್‌ಕುಮಾರ್ ಪತ್ನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸೊರಬ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗೀತಾ ಶಿವರಾಜ್‌ಕುಮಾರ್ ಅವರ ಸಹೋದರ ಮಧು ಬಂಗಾರಪ್ಪ ಸ್ಪರ್ಧಿಸಿದ್ದರು. ಅವರ ಮತ್ತೊಬ್ಬ ಸಹೋದರ ಕುಮಾರ್ ಬಂಗಾರಪ್ಪ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಸೊರಬದಿಂದಲೇ ಕಣಕ್ಕೆ ಇಳಿದಿದ್ದರು.
ನಿನ್ನೆ ನಡೆದ ಮತ ಎಣಿಕೆ ಪೂರ್ಣಗೊಂಡ ನಂತರ ಮಧು ಬಂಗಾರಪ್ಪ ಅವರನ್ನು ಚುನಾವಣಾ ಆಯೋಗ ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಿತು. ಈ ನಡುವೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಗೀತಾ ಶಿವರಾಜ್ ಕುಮಾರ್ ಹಾಗೂ ನಟ ಶಿವರಾಜ್‌ಕುಮಾರ್ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭಾರೀ ಪ್ರಚಾರ ನಡೆಸಿದ್ದರು. ಇವರು ಪ್ರಚಾರ ನಡೆಸಿದ ಒಟ್ಟು ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಭ್ಯರ್ಥಿಗಳು ವಿಜೇತರಾಗಿದ್ದಾರೆ.
ಸಹೋದರ ಮಧು ಬಂಗಾರಪ್ಪ ಅವರ ಗೆಲುವಿನಿಂದ ಸಂತಸಗೊಂಡಿರುವ ಗೀತಾ ಶಿವರಾಜ್‌ಕುಮಾರ್ ಈ ಬಾರಿ ಸಚಿವ ಸಂಪುಟದಲ್ಲಿ ಮಧು ಬಂಗಾರಪ್ಪ ಅವರಿಗೆ ಸ್ಥಾನ ದೊರಕಲಿದೆ. ಕಾಂಗ್ರೆಸ್‌ನಿಂದ ಅವರು ಸಚಿವರಾಗಿ ಹೊರಹೊಮ್ಮಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.