ಮದ್ವನವಮಿ ಆಚರಣೆ


ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.19:- ದ್ವೈತಸಿದ್ದಾಂತ ಪ್ರತಿಪಾದಕರು, ಭಕ್ತಿಪಂಥದ. ನೇತಾರರು ವಾಯುದೇವರ ಅವತಾರ ಎಂದೇ ದೇಶದಾದ್ಯಂತ ಪ್ರಖ್ಯಾತ ರಾದಂತಹ ಶ್ರೀ ಮಧ್ವಾಚಾರ್ಯರು ಬದರಿಕಾಶ್ರಮಕ್ಕೆ ಪ್ರವೇಶ ಮಾಡಿದ  ದಿ ನವನ್ನು ಮಧ್ವನವಮಿ ಎಂದು ಅವರ ಅನುಯಾಯಿಗಳು  ಶ್ರದ್ಧಾಭಕ್ತಿಯಿಂದ ರೇಡಿಯೋ ಪಾಕ೯ ಶ್ರೀವ್ಯಾಸರಾಜಮಠದಲ್ಲಿ ಆಚರಿಸಿದರು. ಮಧ್ವನವಮಿಪ್ರಯುಕ್ತ ಪಂಡಿತ್ ಶ್ರೀ ಜಯಸಿಂಹ ಆಚಾರ್ಯ ಅವರಿಂದ ಮಧ್ವಾಚಾರ್ಯರ ಜೀವನ ಮತ್ತು ಕೃತಿಗಳ ಬಗ್ಗೆ ವಿಶೇಷ ಉಪನ್ಯಾಸ ಜರುಗಿತು. ಪಂಡಿತರಾದ ಶ್ರೀ ಬದರಿನಾನಾರಾಯಣ ಆಚಾರ್ಯ ಹಾಗು ಪ್ರಭಂಜನ್ಆಚಾಯ೯  ಮಧ್ವಾಚಾರ್ಯರಕುರಿತು ಮಾತನಾಡಿದರು.
  ಮಧ್ವಾಚಾರ್ಯರ ಪಟಕ್ಕೆ ವಿಶೇಷ ಅಲಂಕಾರ ಮಾಡಿ ರಜತರಥದಲ್ಲಿರಿಸಿ ಮಠದ ಪ್ರಾಕಾರದಲ್ಲಿ ರಥೋತ್ಸವ ನೇರವೇರಿಸಿ ವಾಯಿತು ಈಸಂದಬ೯ದಲ್ಲಿ ವಾದ್ಯ ಮೇಳ ,ಮಹಿಳೆ ಯರಿಂದ ಕೋಲಾಟ ನಡೆಯಿತು. ಪ್ರಮುಖ ಬೀದಿಗಳಲ್ಲಿಮಧ್ವಾಚಾರ್ಯರ ಪಟದ ಮೆರವಣಿಗೆ ನಡೆಯಿತು ಮೆರವಣಿಗೆಯಲ್ಲಿ ಸಾಮೂಹಿಕ ವಾಗಿದೇವರ ಕೀರ್ತನೆ ಗಳನ್ನು ಹಾಡಲಾಯಿತು.
 ಮಧ್ವನವಮಿನಿಮಿತ್ಯ ಪಂಚಬೃಂದಾವನಗಳಿಗೆ ಪಂಚಾಮೃತ ಅಭಿಷೇಕ ನಡೆಯಿತು. ಪಂಚಬೃಂದಾವನಗಳಿಗೆ ರಜತಕವಚ ಧಾರಣೆ ಮಾಡಿ  ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಶ್ರೀ ವೆಂಕಟೇಶ್ವರ ದೇವರ ಸ್ತೋತ್ರ ವಾಯುಸ್ತುತಿ ಮತ್ತು ಶ್ರೀರಾಘವೇಂದ್ರ ಸ್ವಾಮಿ ಗಳ ಅಷ್ಟೋತ್ತರ ಪಾರಾಯಣ ಜರುಗಿತು. ಮಠದ ಅಚ೯ಕರಾದ ಶ್ರೀ ಕೆ.ಪಾಂಡುರಂಗಾಚಾಯ೯ಹಾಗೂಅರಳಿಕಟ್ಟಿಶ್ರೀನಿವಾಸಾಚಾಯ೯ರುಪೂಜಾ ಕೈಂಕರ್ಯ ಗಳನ್ನು ನೇರವೇರಿಸಿದರು. ನಂತರ ಮಹಾಮಂಗಳಾರತಿ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ನಡೆಯಿತು. ಸಾಯಂಕಾಲ ಶ್ರೀವ್ಯಾಸರಾಜಭಜನಾ ಮಂಡಳಿ ,,ಶ್ರೀಚಂದ್ರಿಕಾಚಾಯ೯ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಸ್ವಸ್ತಿವಾಚನ, ಮಂಗಳಾರತಿ ನಡೆದವು. ಕಾರ್ಯಕ್ರಮ ದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.

One attachment • Scanned by Gmail