
ಮಾನ್ವಿ,ಆ.೧೩ – ತಾಲೂಕಿನ ಮದ್ಲಾಪೂರು ಗ್ರಾಮದ ಸರಕಾರಿ ಉನ್ನತೀಕರಿಸಿದ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯಿಂದ ಬೇರೆ ಊರಿಗೆ ವರ್ಗಾವಣೆಯಾಗಿರುವ ಎಚ್ ಪೀರಭಾಷ, ತಮ್ಮಣ್ಣ ರಾಠೋಡ್, ಅಂಬಣ್ಣ, ಎಸ್ ಪರ್ವೇಜ್, ಅರುಣಾಬಾಯಿ, ರೇಖಾ, ಮಂಜುಳಾ, ಮುಮ್ತಾಜ್ ಇವರನ್ನು ತೆರೆದ ವಾಹನದಲ್ಲಿ ಊರಿನ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿಯವರು ಸಹಯೋಗದೊಂದಿಗೆ ಅದ್ದೂರಿ ಮೆರವಣಿಗೆಯ ಮೂಲಕ ಬಿಳ್ಕೋಡಿಗೆಯನ್ನು ಮಾಡಿದರು..
ತಾಲೂಕಿನ ಮದ್ಲಾಪೂರು ಗ್ರಾಮದಲ್ಲಿ ಶನಿವಾರ ನಡೆದ ವರ್ಗಾವಣೆಗೊಂಡ ಶಿಕ್ಷಕರಿಗೆ ಬಿಳ್ಕೋಡಿಗೆ ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು ನಂತರ ವರ್ಗಾವಣೆಯಾದ ಎಲ್ಲಾ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳಿಂದ ನೆನಪಿನ ಕಾಣಿಕೆ ಹಾಗೂ ಗೌರವ ಸನ್ಮಾನವನ್ನು ಮಾಡಲಾಯಿತು..
ನಂತರ ವರ್ಗಾವಣೆಗೊಂಡ ಶಿಕ್ಷಕರು ಮಾತಾನಾಡಿ ನಾವು ಇಷ್ಟು ವರ್ಷಗಳ ಕಾಲ ಇಂತಹ ಒಳ್ಳೆಯ ಗ್ರಾಮದಲ್ಲಿ ಕೆಲಸ ಮಾಡಿದ್ದು ಹಾಗೂ ನಿಮ್ಮಂತ ವಿದ್ಯಾರ್ಥಿಗಳನ್ನು ಪಡೆದಿದ್ದು ನಮ್ಮ ಪೂರ್ವಜನ್ಮದ ಪುಣ್ಯ ಆದರೆ ನಾವು ವರ್ಗಾವಣೆಯಾಗಿದ್ದು ನಮ್ಮ ಕುಟುಂಬದ ಜೊತೆಗೆ ಸ್ವಲ್ಪ ದಿನಗಳಾದರು ಕಾಲವನ್ನು ಕಳೆಯೋಣವೆಂದು ನಿರ್ಧರಿಸಿ ತೆರಳುತ್ತಿದದ್ದು ನಮಗೆ ಅತೀವವಾದ ದುಃಖವನ್ನು ತರಿಸಿದೆ ಆದರೂ ನೀವುಗಳು ನಮ್ಮನ್ನು ಅದ್ಧೂರಿಯಾದ ಕಾರ್ಯಕ್ರಮದ ಮೂಲಕ ಬಿಳ್ಕೋಡಿಗೆ ಮಾಡುತ್ತಿರುವುದು ಒಂದು ಕಡೆಯಿಂದ ಸಂತೋಷವಾದರೆ ಇನ್ನೊಂದು ಕಡೆಯಿಂದ ದುಃಖವಾಗುತ್ತಿದೆ, ನಾವು ಮುಂದಿನ ದಿನಗಳಲ್ಲಿ ಎಲ್ಲಿಯೇ ಕೆಲಸ ಮಾಡಲಿ ನಿಮ್ಮನ್ನು ಹಾಗೂ ನಿಮ್ಕ ಊರನ್ನು ವಿಶೇಷವಾಗಿ ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಮರೆಯುದಿಲ್ಲ ಎಂದು ಬಹಳ ದುಃಖಬರಿತವಾಗಿ ಹೇಳಿದರು..
ಶಾಲೆ ವಿದ್ಯಾರ್ಥಿಗಳಿಂದ ಕೋಲಾಟದ ಮೂಲಕ ಅದ್ದೂರಿಯಾದ ಮೆರವಣಿಗೆಯ ಮೂಲಕ ಗುರುವಂದನೆ ಸಮರ್ಪಣೆ ಮಾಡಿದರು ನಂತರ ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿಗಳು ಮಾತಾನಾಡಿ ವರ್ಗಾವಣೆಗೊಂಡ ಶಿಕ್ಷಕರ ಸಾಧನೆಯನ್ನು ಇಂದಿನ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಚನ್ನಯ್ಯ ಸ್ವಾಮಿ, ಮುಖ್ಯ ಗುರುಗಳಾದ ಯೂನುಸ್ ಬಾಬು, ಶಿಕ್ಷಕರಾದ ಮೌನೇಶ ಪೋತ್ನಾಳ, ಸಂದೀಪ್, ಶ್ರೀಕಾಂತ, ಸುಮಾ ನಿವೃತ್ತ ಶಿಕ್ಷಕ ಯುಸೂಪ್, ಹಳೆಯ ವಿದ್ಯಾರ್ಥಿಗಳಾದ ಮಹೆಬೂಬ್ ಮದ್ಲಾಪೂರು, ಮೇಘನಾ, ಈರಮ್ಮ ನಾಗಭೂಷಣ, ಮಹದೇವಾ, ಅಯ್ಯಪ್ಪ, ಸುಭಾಷ್, ಭೀಮೆಶ್,ನರಸಯ್ಯ, ಬುಸ್ಸಯ್ಯ,ಮುತ್ತಣ್ಣ, ವೀರೇಂದ್ರ, ಬಸವ, ಸಂಜೀವ, ಹುಸೇನಿ, ರವಿ, ಅರುಣ, ಅಯ್ಯಪ್ಪ, ಮಹ್ಮದ್, ವೀರೇಶ್, ವಸಂತಾ, ಬಸವ, ವಿನಯ, ಕೃಷ್ಣ, ಸೇರಿದಂತೆ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು..