`ಮದ್ರಾಸ್ ಐ’ ಹಾವಳಿ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು19: ಹವಾಮಾನ ವೈ ಪರಿತ್ಯದಿಂದಾಗಿ ಆರೋಗ್ಯದ ಮೇಲೆ ಅನೇಕ ಪರಿಣಾಮಗಳು ಕಾಣಿಸಿಕೊಳ್ಳುತ್ತಿದ್ದು ಕಳೆದೊಂದು ವಾರದಿಂದ ಪಟ್ಟಣ ಸೇರಿದಂತೆ ಅನೇಕ ಕಡೆ ಕಣ್ಣುಬೇನೆ ಅಂದರೆ ಮದ್ರಾಸ್ ಐ ಪಾಲಿಸಿಕೊಂಡಿದೆ.
ಕಣ್ಣುಬೇನೆಗೆ ಕಂಜಕ್ಟೀವ್‍ಐ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯಲ್ಪಡುತ್ತದೆ ಇದರ ಮುಖ್ಯ ಲಕ್ಷಣವೆಂದರೆ ಕಣ್ಣು ಕೆಂಪಾಗಿ ಸ್ವಲ್ಪಮಟ್ಟಿಗೆ ಉರಿ ಮತ್ತು ಕಣ್ಣಿನ ಕುಣಿಕೆಯಲ್ಲಿ ಪಿಚ್ಚು ಕಾಣಿಸಿಕೊಳ್ಳುತ್ತದೆ ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ ಎರಡು ಮೂರು ದಿನಗಳ ಕಾಲ ಇದ್ದು ನಂತರ ಯಥಾಸ್ತುತಿ ಇರುತ್ತದೆ ಎಂಬುದು ವೈದ್ಯರ ಹೇಳಿಕೆಯಾಗಿದೆ. ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಕಾಂತ್ ಕಾಟೆ ವಾಲೆ ಅವರ ಹೇಳಿಕೆಯ ಪ್ರಕಾರ 1918ರಲ್ಲಿ ಮೊಟ್ಟಮೊದಲು ಈ ಬೇನೆ ಕಾಣಿಸಿಕೊಂಡಿದ್ದರಿಂದ ಇದಕ್ಕೆ ಮದ್ರಾಸ್ ಐ ಎಂದು ಕರೆಯಲ್ಪಡುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿ ಇದನ್ನು ಕಣ್ಣು ಬೇನೆ ಎಂದು ಕರೆಯುತ್ತಾರೆ.
ಕಣ್ಣುಬೇನೆ ಕಾಣಿಸಿಕೊಂಡವರು ಪದೇ ಪದೇ ಬೆಚ್ಚನೆಯ ನೀರು ಅಥವಾ ತಣ್ಣೀರಿನಿಂದ ಮೃದುವಾದ ಬಟ್ಟೆಯಿಂದ ಆಗ್ಗಾಗ್ಗೆ ಸ್ವಚ್ಛಗೊಳಿಸಬೇಕು ಇದು ಒಬ್ಬರಿಂದ ಒಬ್ಬರಿಗೆ ಹರಡುವ ಬೇನೆ ಆಗಿದ್ದು ಇವರು ಉಪಯೋಗಿಸಿದ ಯಾವುದೇ ಬಟ್ಟೆಗಳನ್ನು ಮತ್ತೊಬ್ಬರು ಉಪಯೋಗಿಸಬಾರದು ಎಂದು ಸಲಹೆ ನೀಡಿದ್ದಾರೆ.