
ತಿರುವನಂತಪುರಂ, ಏ.೭- ಮದ್ಯದ ಅಮಲಿನಲ್ಲಿ ಸಮವಸ್ತ್ರದಲ್ಲಿಯೇ ದೇವಸ್ಥಾನದ ಮುಂದೆ ಕುಣಿದು ಕುಪ್ಪಳಿಸಿದ್ದ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾಂಥನಾಪರದ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೆ.ಪಿ.ಶಾಜಿ ಅಮಾನತುಗೊಂಡ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಆಗಿದ್ದಾರೆ.
ಪೂಪ್ಪಾರದ ದೇವಸ್ಥಾನದ ಉತ್ಸವ ಆಯೋಜನೆ ಸಂದರ್ಭದಲ್ಲಿ ಸಮವಸ್ತ್ರದಲ್ಲಿ ಆಗಮಿಸಿದ್ದ ಈತ ನೃತ್ಯ ಮಾಡಿದ್ದ. ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಳಿಕ ತನಿಖೆ ನಡೆಸಲಾಗಿತ್ತು.
ತನಿಖೆ ವೇಳೆ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಾಜಿ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಎರ್ನಾಕುಲಂ ಡಿಐಜಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.