ಮದ್ಯ ವ್ಯಸನದಿಂದಾಗಿ ಜಾವೇದ್ ಅಖ್ತರ್ ಅವರ ಮೊದಲ ಮದುವೆ ಮುರಿದು ಬಿದ್ದಿತ್ತು

“ನಾನು ಒಳ್ಳೆಯ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ನನ್ನ ಮೊದಲ ಮದುವೆಯು ಮಾದಕ ವ್ಯಸನದಿಂದ ಕೊನೆಗೊಳ್ಳುತ್ತಿರಲಿಲ್ಲ…”
ಈ ಮಾತು ಹೇಳಿದವರು ಖ್ಯಾತ ಸಾಹಿತಿ-ಕವಿ ಬಾಲಿವುಡ್ ನ ಜಾವೇದ್ ಅಖ್ತರ್.
ಒಂದಲ್ಲ ಒಂದು ಕಾರಣಕ್ಕಾಗಿ ಮಾಧ್ಯಮದ ಮುಖ್ಯಾಂಶಗಳಲ್ಲಿ ಜಾವೇದ್ ಬರುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರ ಹೇಳಿಕೆಗಳ ಬಗ್ಗೆ ಮತ್ತು ಕೆಲವೊಮ್ಮೆ ಅವರ ವೈಯಕ್ತಿಕ ಜೀವನದ ಬಗ್ಗೆ.ಅವರು ಇತ್ತೀಚೆಗೆ ತಮ್ಮ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ.
ಮದ್ಯ ವ್ಯಸನದಿಂದಾಗಿ ಜಾವೇದ್ ಅಖ್ತರ್ ಅವರ ಮೊದಲ ಮದುವೆ ಮುರಿದುಬಿದ್ದಿತ್ತು ಎನ್ನುವುದು ಅನೇಕರಿಗೆ ತಿಳಿದಿರಲಾರದು.
ಸಂದರ್ಶನದಲ್ಲಿ ಜಾವೇದ್ ಅಖ್ತರ್, “ನಾನು ಒಳ್ಳೆಯ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ನನ್ನ ಮೊದಲ ಮದುವೆಯು ಮದ್ಯವ್ಯಸನದಿಂದ ಕೊನೆಗೊಳ್ಳುತ್ತಿರಲಿಲ್ಲ” ಎಂದು ಹೇಳಿದ್ದಾರೆ. ಕುಡಿತದ ಚಟದಿಂದ ನನ್ನ ಮೊದಲ ಮದುವೆ ಮುರಿದುಬಿದ್ದಿದೆ ಎಂದರು. ಮೊದಲ ಪತ್ನಿ ಬಗ್ಗೆ ಮಾತನಾಡಿದ ಅವರು, ಆಕೆ ಒಳ್ಳೆಯ ಮಹಿಳೆ. ಅವರ ಬಗ್ಗೆ ನನಗೆ ಸದಾ ಗೌರವವಿದೆ. ನಾನು ಅವರನ್ನು ಗೌರವಿಸುತ್ತೇನೆ, ಅದಕ್ಕಾಗಿಯೇ ನಾವು ಇಂದು ಉತ್ತಮ ಸ್ನೇಹಿತರಾಗಿದ್ದೇವೆ” ಎಂದಿದ್ದಾರೆ.
ಶಬಾನಾ ಅಜ್ಮಿ ಬಗ್ಗೆ ಹೀಗೆ ಹೇಳಿದ್ದಾರೆ:
ಅದೇ ಸಮಯದಲ್ಲಿ, “ನನ್ನ ಈ ಕೆಟ್ಟ ಅಭ್ಯಾಸವನ್ನು ಶಬಾನಾ ಹೇಗೆ ಸಹಿಸಿಕೊಂಡಿದ್ದಾಳೋ ಎಂದು ನನಗೆ ತಿಳಿದಿಲ್ಲ” ಎಂದೂ ಜಾವೇದ್ ಅಖ್ತರ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, “ಶಬಾನಾ ನನ್ನೊಂದಿಗೆ ಸುಮಾರು ೧೦ ವರ್ಷಗಳ ಕಾಲ ಸಂಬಂಧವನ್ನು ಉಳಿಸಿಕೊಳ್ಳುವಷ್ಟು ಸಂವೇದನಾಶೀಲರಾಗಿದ್ದರು.ಆವಾಗ ಶಬಾನಾ ಮದ್ಯಪಾನ ಮಾಡುವವನನ್ನು ಹೇಗೆ ಮದುವೆಯಾದರೋ ಗೊತ್ತಿಲ್ಲ” ಎಂದಿದ್ದರು.
ಈ ವಿಷಯದ ಬಗ್ಗೆ ಈ ಹಿಂದೆಯೂ ಮಾತನಾಡಿದ್ದಾರೆ:
ಇದಕ್ಕೂ ಮೊದಲು ಜಾವೇದ್ ಅಖ್ತರ್ ಇದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಅರ್ಬಾಜ್ ಖಾನ್ ಅವರ ’ದಿ ಇನ್ವಿನ್ಸಿಬಲ್ಸ್’ ಶೋನಲ್ಲಿ ಇದನ್ನು ಬಹಿರಂಗಪಡಿಸುವಾಗ, ’ನಾನು ಯಾವುದೇ ದುಃಖದಲ್ಲಿ ಇರಲಿಲ್ಲ. ನಾನು ಅದನ್ನು ಆನಂದಿಸಿದ್ದರಿಂದ ನಾನು ಕುಡಿಯುತ್ತಿದ್ದೆ, ಆದರೆ ನಂತರ ನನಗೆ ಒಂದು ವಿಷಯ ಅರ್ಥವಾಯಿತು, ನಾನು ಕುಡಿಯುವ ರೀತಿಯಲ್ಲಿ, ನಾನು ೫೨-೫೩ ವಯಸ್ಸಿನವರೆಗೆ ಮಾತ್ರ ಬದುಕಲು ಸಾಧ್ಯವಾಗುತ್ತದೆ….ಎಂದು ಭಾವಿಸಿದ್ದೆ….”
“ನಂತರ ಜುಲೈ ೩೧, ೧೯೯೧ ರಂದು, ನಾನು ಸಂಪೂರ್ಣವಾಗಿ ಮದ್ಯವನ್ನು ತ್ಯಜಿಸಲು ನಿರ್ಧರಿಸಿದೆ. ಆ ರಾತ್ರಿ ನಾನು ಸಂಪೂರ್ಣ ರಮ್ ಬಾಟಲಿಯನ್ನು ಮುಗಿಸಿದೆ ಮತ್ತು ಮತ್ತೆ ಅದನ್ನು ಮುಟ್ಟಲಿಲ್ಲ.” ಎಂದರು.

ಪ್ರೇಯಸಿ ಪೂಜಾಳ ತಂದೆ ಮಹೇಶ್ ಭಟ್ ರನ್ನು ಟೀಕಿಸಿದ ರಣವೀರ್ ಶೋರೆ

“ಇಂಡಸ್ಟ್ರಿಯಲ್ಲಿ ನನ್ನ ವಿರುದ್ಧವೂ ಅನೇಕ ಪಿತೂರಿಗಳು ನಡೆದಿವೆ “

ಮಾಜಿ ಗೆಳತಿ ಪೂಜಾ ಭಟ್ ಅವರ ತಂದೆ ಮಹೇಶ್ ಭಟ್ ಮತ್ತು ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಇದೀಗ ರಣವೀರ್ ಶೋರೆ ಪ್ರತಿಕ್ರಿಯೆ ಬಹಿರಂಗಪಡಿಸಿದ್ದಾರೆ. ರಣವೀರ್ ಶೋರೆ ಗೊತ್ತಲ್ಲ, ಕೊಂಕಣ ಸೇನ್ ಶರ್ಮಾರ ಪತಿ.
ಜಗತ್ತಿನಲ್ಲಿ ಅನೇಕ ಪ್ರೇಮಕಥೆಗಳು ಹುಟ್ಟಿಕೊಂಡಿವೆ ಮತ್ತು ಕೊನೆಗೊಂಡಿವೆ. ಆದರೆ ಕೆಲವು ಪ್ರೇಮಕಥೆಗಳು ಪ್ರಸಿದ್ಧವಾದವು ಮತ್ತು ಕೆಲವು ಕಾಲಾನಂತರದಲ್ಲಿ ಸಮಾಧಿಯಾದವು. ಅಂತಹ ಒಂದು ಕಥೆಗೆ ಸಂಬಂಧಿಸಿದ ಕೆಲವು ವಿಷಯಗಳು ಬೆಳಕಿಗೆ ಬಂದಿವೆ, ಇದನ್ನು ಕೇಳಿದರೆ ಜನರೂ ಸಾಕಷ್ಟು ಆಶ್ಚರ್ಯ ಪಡುತ್ತಾರೆ.
ಬಾಲಿವುಡ್ ನಟ ರಣವೀರ್ ಶೋರೆ ತಮ್ಮ ಮಾಜಿ ಗೆಳತಿ ಪೂಜಾ ಭಟ್ ಮತ್ತು ಆಕೆಯ ತಂದೆ ಮಹೇಶ್ ಭಟ್ ಮತ್ತು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಕೆಲವು ವಿಷಯಗಳನ್ನು ಬಹಿರಂಗವಾಗಿ ಮಾತನಾಡಿದ್ದಾರೆ.


ರಣವೀರ್ ಪೂಜಾ ಭಟ್ ಜೊತೆ ಡೇಟಿಂಗ್ ಮಾಡಿದ್ದರು:
ರಣವೀರ್ ಶೋರೆ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ಕಥೆಗಳನ್ನು ಹಂಚಿಕೊಂಡಿದ್ದಾರೆ, ಅದರ ಬಗ್ಗೆ ಅವರು ಇಲ್ಲಿಯವರೆಗೆ ಮೌನವಾಗಿದ್ದರು. ಆಲಿಯಾ ಭಟ್ ಅವರ ಮಲಸಹೋದರಿ ಪೂಜಾ ಭಟ್ ನಟ ರಣವೀರ್ ಶೋರೆ ಅವರೊಂದಿಗೆ ಸಂಬಂಧದಲ್ಲಿದ್ದ ಒಂದು ಸಮಯವಿತ್ತು. ಅಂತಹ ಪರಿಸ್ಥಿತಿಯಲ್ಲಿ, ರಣವೀರ್ ಪೂಜಾ ಅವರ ತಂದೆ ಮತ್ತು ಚಲನಚಿತ್ರ ನಿರ್ದೇಶಕ ಮಹೇಶ್ ಭಟ್ ಅವರೊಂದಿಗಿನ ಹದಗೆಡುತ್ತಿರುವ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದರು.


ಮಹೇಶ್ ಭಟ್ ಬಗ್ಗೆ ಮೌನ ಮುರಿದರು:
ಪೂಜಾ ಭಟ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ರಣವೀರ್ ಶೋರೆ, “ನಾನು ಮಹೇಶ್ ಭಟ್ ಅವರನ್ನು ತುಂಬಾ ಗೌರವಿಸುತ್ತೇನೆ, ನನಗೆ ಅವರ ಬಗ್ಗೆ ತುಂಬಾ ಗೌರವವಿತ್ತು. ಆದರೆ ಅವರು ನನ್ನನ್ನು ದುರುಪಯೋಗಪಡಿಸಿದರು ಮತ್ತು ನಾನು ಕೂಡ ತುಳಿತಕ್ಕೊಳಗಾಗಿದ್ದೇನೆ. ನಾನು ಆವಾಗ ತುಂಬಾ ಅಸಮಾಧಾನಗೊಂಡಿದ್ದೆ, ಅದು ನನಗೆ ತುಂಬಾ ಕೆಟ್ಟ ಅವಧಿಯಾಗಿದೆ” ಎಂದರು. ಅದರ ಬಗ್ಗೆ ವಿವರ ಹೇಳಲು ನಿರಾಕರಿಸಿದರು.


ಸುಶಾಂತ್ ಬಗ್ಗೆ ರಣವೀರ್ ಮುಕ್ತವಾಗಿ ಮಾತನಾಡಿದ್ದಾರೆ:
ಪೂಜಾ ಮತ್ತು ಮಹೇಶ್ ಭಟ್ ಹೊರತುಪಡಿಸಿ, ರಣವೀರ್ ಶೋರೆ ಈ ಸಮಯದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಂಡರು. ದಿವಂಗತ ನಟನ ಬಗ್ಗೆ ಮಾತನಾಡಿದ ಅವರು, ಸುಶಾಂತ್ ಅವರ ಹೃದಯಕ್ಕೆ ತಾನು ತುಂಬಾ ಹತ್ತಿರವಾಗಿದ್ದೆ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ನಾವು ಉತ್ತಮ ಸ್ನೇಹಿತರಾಗಿದ್ದೆವು, ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ಸೋಂಚಿರೈಯಾ ಚಿತ್ರದ ಶೂಟಿಂಗ್ ೨ ತಿಂಗಳ ಕಾಲ ನಡೆಯಿತು. ಆ ಸಮಯದಲ್ಲಿ ನಾವು ಒಬ್ಬರಿಗೊಬ್ಬರು ಸಾಕಷ್ಟು ಪರಿಚಯ ಮಾಡಿಕೊಂಡೆವು, ಆ ಸಮಯದಲ್ಲಿ ಅವರು ನಮ್ಮ ಮನೆಗೆ ಹಲವಾರು ಬಾರಿ ಬಂದಿದ್ದರು ಎಂದರು
ಉದ್ಯಮದ ಕರಾಳ ಸತ್ಯ:
ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಮಾತನಾಡುತ್ತಾ, ವೃತ್ತಿಯನ್ನು ಹಾಳು ಮಾಡುವುದು ಮತ್ತು ಜನರನ್ನು ಬದಿಗಿಡುವುದು ಉದ್ಯಮದಲ್ಲಿ ತುಂಬಾ ಸಾಮಾನ್ಯವಾಗಿದೆ. ಇಂಡಸ್ಟ್ರಿಯಲ್ಲಿ ನನ್ನ ವಿರುದ್ಧವೂ ಅನೇಕ ಪಿತೂರಿಗಳು ನಡೆದಿವೆ ಮತ್ತು ಇದೆಲ್ಲವೂ ಸುಶಾಂತ್ ಜೊತೆಯಲ್ಲೂ ನಡೆದಿದೆ. ಇದನ್ನು ಯಾರೂ ದಾಖಲೆಯಲ್ಲಿ ಒಪ್ಪಿಕೊಳ್ಳುವುದಿಲ್ಲ ಎಂಬುದು ಬೇರೆ ಮಾತು. ಚಿತ್ರರಂಗದಲ್ಲಿ ಯಾರನ್ನಾದರೂ ಕಡೆಗಣಿಸುವುದು, ಯಾರದ್ದೋ ವಿರುದ್ಧ ಇಡೀ ’ಗ್ಯಾಂಗ್’ ಹುಟ್ಟುಹಾಕುವುದು ಮತ್ತು ಮುಖ್ಯವಾಗಿ ಯಾರನ್ನಾದರೂ ಅವಮಾನಿಸುವುದು ಎಲ್ಲವೂ ಇಲ್ಲಿ ನಡೆಯುತ್ತದೆ ಮತ್ತು ಇದರಲ್ಲಿ ಸುಳ್ಳಿಲ್ಲ ಎಂದು ಒಪ್ಪಿಕೊಳ್ಳಲು ನಾನು ಹಿಂಜರಿಯಲಾರೆ ಎಂದರು.