ಮದ್ಯ ಮಾರಾಟದ ಅಂಗಡಿ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ :

ಸಂಜೆವಾಣಿ ವಾರ್ತೆ          
ಹಗರಿಬೊಮ್ಮನಹಳ್ಳಿ:ಸೆ.17 ಗ್ರಾಮದ ಸ್ವಾಸ್ಥ್ಯವನ್ನು ಹಾಳು ಮಾಡುವ ಜೊತೆಗೆ ಮಾಲವಿ ಜಲಾಶಯದ ಸುತ್ತಾಮುತ್ತಾಲಿನ ವಾತಾವರಣವನ್ನು ಕಲುಷಿತಗೊಳಿಸುವ ಅನೈಕ್ಯತಿಕ ಚಟುವಟಿಕೆ ತಾಣವಾಗಲು ಎಡೆಮಾಡಿಕೊಡುವ ಮದ್ಯದ ಅಂಗಡಿಯನ್ನು ಮಾಲವಿ ಜಲಾಶಯದ ಬಳಿಯಲ್ಲಿಯೇ ಶುರು ಮಾಡಲು ಹೊರಟಿರುವುದು ದುರಾದೃಷ್ಟಕರ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹ್ಯಾಳ್ಯಾದ್ ಚನ್ನಬಸಪ್ಪ ತಿಳಿಸಿದರು.        
 ಮಾಲವಿ ಗ್ರಾಮ ಪಂಚಾಯತಿ ಆವರಣದಲ್ಲಿ ಗುರುವಾರ  ಮದ್ಯ ಮಾರಾಟ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮದಲ್ಲಿ ಮದ್ಯ ಮಾರಾಟ ಅಂಗಡಿ ಪ್ರಾರಂಭದಿಂದ ಬಡವರ ಕೂಲಿ ಕಾರ್ಮಿಕರ ರೈತರ ಮಹಿಳೆಯರ ಮಕ್ಕಳ ಜೀವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮಾಲವಿ ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು.             
ಚಲವಾದಿ ಪ್ರಕಾಶ ಈ ಹಿಂದೆ ಮದ್ಯ ಮಾರಾಟ ಮಾಡುವವರ ವಿಷಯವಾಗಿ ಟೆಂಡರ್ ಮಾಡಿ ದೇವಸ್ಥಾನಗಳ ಅಭಿವೃದ್ದಿ ಕಾರ್ಯಗಳಿಗೆ ಅದರಿಂದ ಬಂದ ಹಣವನ್ನು ಬಳಸಿಕೊಳ್ಳುವಂತಹ ಅಗತ್ಯತೆ ಇರಲಿಲ್ಲ ಇನ್ನು ಮುಂದೆ ಆದರೂ ಮದ್ಯ ಮಾರಾಟ ನಿಷೇದಿಸುವುದಾದರೆ  ಮಾಲವಿ ಗ್ರಾಮದ ನೂರಾರು ಜನರು ಪ್ರತಿಭಟನೆ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನೆಡೆಸಿದರು.ಈ ವಿಷಯವಾಗಿ ಅಬಕಾರಿ ಇಲಾಖೆಯ ಅಧಿಕಾರಿ ಮಮತ, ಗ್ರಾಮ ಪಂಚಾಯತಿ ಪಿಡಿಒ ನವೀನ್ ಕುಮಾರ್,ಹಾಗೂ ಗ್ರಾಮಲೆಕ್ಕಾಧಿಕಾರಿ ನಾಗರತ್ಮ ಅವರಿಗೆ ಮದ್ಯದ ಅಂಗಡಿಗೆ ಪರವಾನಿ ನೀಡಬಾರದು ಎಂದು ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರು ಮಹಿಳೆಯರು ಮನವಿ ಸಲ್ಲಿಸಿದರು.                 
 ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಕೋಟಗಿ ನಾಗರಾಜ ಚಿಲಗೋಡು ರಂಜಿತ ಸುರೇಶ್,ಅಮ್ಮರ್ ಮಂಜುನಾಥ,ಚಲವಾದಿ ಗಿರೀಶ್,ಹಾಗೂ ಕಬ್ಬಳ್ಳಿ ಪುಟ್ಟಮ್ಮ,ರೈತ ಮುಖಂಡ ಹತ್ತಿ ಅಡಿವೆಪ್ಪ ಗ್ರಾಕೂಸ ಸಂಚಾಲಕ ಕೋಗಳಿ ಮಲ್ಲೇಶ್ ಸಂಚಾಲಕಿ ಕೊಟ್ರಮ್ಮ,ರೈತ ಸಂಘದ ಶಂಶದ್ ಬೇಗಂ, ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹ್ಯಾಳ್ಯಾದ್ ಚನ್ನಬಸಪ್ಪ, ಮಾಜಿ ಸದಸ್ಯ ಸಿ.ಈಶಪ್ಪ, ಅಜೀಜ್ ಸಾಬ್, ಚ ಲವಾದಿ ಪ್ರಕಾಶ, ಚಿಲಗೋಡು ಸುರೇಶ್, ಕಟಿಗಿ ಚಂದ್ರಪ್ಪ, ಹರೇಗೊಂಡನಹಳ್ಳಿ ದುರುಗಪ್ಪ, ಜೆಎಸ್ ಪ್ರಕಾಶ ಇದ್ದರು.