ಮದ್ಯ ನಿಷೇಧ ಆಂದೋಲನ:ಧರಣಿ ಸತ್ಯಾಗ್ರಹ-ತಾತ್ಕಾಲಿಕ ಹಿಂಪಡೆ

ರಾಯಚೂರು. ಏ.4.ಕೆಲವು ತಿಂಗಳಿನಿಂದ ಮದ್ಯ ನಿಷೇಧ ಆಂದೋಲನ ಕರ್ನಾಟಕ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯುವುತ್ತಿದ್ದೇವೆ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕದ ಮುಖಂಡೇ ವಿದ್ಯಾ ಪಾಟೀಲ್ ಅವರು ಹೇಳಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ರಾಜ್ಯದಲ್ಲಿ ಅಕ್ರಮ ಮದ್ಯ ನಿಷೇಧಕ್ಕೆ ಸಂಬಂಧಪಟ್ಟಂತೆ ಗುಲ್ಬರ್ಗ ಹೈಕೋರ್ಟ್ ಮದ್ಯ ನಿಷೇಧಕ್ಕೆ ಆದೇಶ ಹೊರಡಿಸಿದ್ದರು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಅದರಿಂದ ಫೆ.11ರಿಂದ ಮದ್ಯ ನಿಷೇಧ ಆಂದೋಲನ ಕರ್ನಾಟಕ ನಮ್ಮ ಸಂಘವು ಧರಣಿ ಸತ್ಯಾಗ್ರಹವನ್ನು ನಗರದಲ್ಲಿ ನಡೆಸುತ್ತಿದ್ದು.ಇತ್ತೀಚಿಗೆ ನಗರ ಶಾಸಕ ಶಿವರಾಜ ಪಾಟೀಲ್ ಅವರು ಭೇಟಿ ನೀಡಿ ಮಾ.25.ರಂದು ಮುಖ್ಯಮಂತ್ರಿಗಳು,ಕಂದಾಯ, ಗ್ರಾಮೀಣ ಮತ್ತು ಪಂಚಾಯತ್ ರಾಜ್, ಗೃಹ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನೂಳಗೊಂಡ ಸಭೆಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗಳು ಆಯೋಜಿಸಿ ನಮ್ಮನ್ನೂ ಆಹ್ವಾನಿಸಬೇಕೆಂಬ ನಮ್ಮ ಬೇಡಿಕೆಯನ್ನು ಒಪ್ಪಿ, ಸಭೆ ನಿಗಧಿ ಪಡಿಸುವ ಭರವಸೆಯನ್ನು ನೀಡಿದ್ದರು.
ಈ ಭರವಸೆಯನ್ನು ಲಿಖಿತ ರೂಪದಲ್ಲಿ ನಮ್ಮ ಕೈ ಸೇರಲಿಲ್ಲ ಅದರಿಂದ ನಾವು ಮತ್ತೆ ಸತ್ಯಾಗ್ರಹ ಮುಂದುವರೆಸಿದ್ದೆವು ನಿನ್ನೆ ಮತ್ತೆ ಸರ್ಕಾರದ ಪ್ರತಿನಿಧಿಯಾಗಿ ಶಾಸಕ ಡಾ.ಶಿವರಾಜ್ ಪಾಟೀಲ ಅವರು ಸತ್ಯಾಗ್ರಹ ನಡೆಯುವು ಸ್ಥಳಕ್ಕೆ ಆಗಮಿಸಿ ನಮಗೆ ಹೇಳಿದರು, ಉಪಚುನಾವಣೆ ಮುಗಿದ ತಕ್ಷಣ ಸಭೆ ಆಯೋಜಿಸಲು ಏರ್ಪಾಡು ಮಾಡಬೇಕೆಂದು ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ, ಅದರಿಂದ ಆ ಜವಾಬ್ದಾರಿ ನನ್ನದೇ ಎಂದು ಹೇಳಿದ್ದಾರೆ ಅದರಿಂದ ಶಾಸಕರ ಭರವಸೆ ಒಪ್ಪಿ ಇಂದು ನಮ್ಮ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗುತ್ತಿದ್ದು ಸರ್ಕಾರ ಅಕ್ರಮ ಮದ್ಯ ನಿಷೇಧ ಮಾಡದಿದ್ದರೆ ಮತ್ತೆ ಸತ್ಯಾಗ್ರಹವನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಶಾರದ ಹುಲಿನಾಯಕ್, ಫಾತಿಮಾ ಹುಸೇನ್,ಮಾರೆಮ್ಮ,ಟಿ.ಯಲ್ಲಮ್ಮ, ಪಾರ್ವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.