ಮದ್ಯ ಅಕ್ರಮ ಮಾರಾಟ ನಾಲ್ವರು ಬಂಧನ

ದೇವದುರ್ಗ,ಮಾ.೧೭- ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಮದ್ಯ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮೂರು ಕಡೆ ಪಿಐ ಕೆ.ಹೊಸಕೇರಪ್ಪ ನೇತೃತ್ವದ ಪೊಲೀಸರ ತಂಡ ಬುಧವಾರ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನ ಹೂವಿನಹೆಡಗಿ ಗ್ರಾಮದ ಪಾನ್‌ಶಾಪ್ ಮೇಲೆ ರೈಡ್ ಮಾಡಿ, ಗೂಳಯ್ಯ ಚನ್ನಯ್ಯಸ್ವಾಮಿಯನ್ನು ಬಂಧಿಸಿ, ಆರೋಪಿಯಿಂದ ೧೧೨೪ರೂ. ಮೌಲ್ಯದ ವಿವಿಧ ಮದ್ಯದ ಬಾಟಲಿ, ಪೌಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸಿರವಾರ ಕ್ರಾಸ್ ಹತ್ತಿರ ಡಬ್ಬಾ ಅಂಗಡಿ ಮೇಲೆ ದಾಳಿ ನಡೆಸಿ ಯಂಕಣ್ಣ ಮಾನಪ್ಪ ನಾಯಕನನ್ನು ಬಂಧಿಸಿ ಆರೋಪಿಯಿಂದ ೨೫೦೫ರೂ. ಮೌಲ್ಯದ ವಿವಿಧ ಕಂಪನಿಯ ಮದ್ಯದ ಬಾಟಲಿ, ಪೌಚ್ ಜಪ್ತಿ ಮಾಡಲಾಗಿದೆ.
ಸಿರವಾರ ಕ್ರಾಸ್‌ನ ಪಾನ್‌ಶಾಪ್ ಮೇಲೆ ಕಾರ್ಯಾಚರಣೆ ನಡೆಸಿ ಭೀಮಣ್ಣ ಹನುಮಯ್ಯ ಭೋವಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ ೫೫೪೯ರೂ. ಮೌಲ್ಯದ ಮದ್ಯದ ಬಾಟಲಿ, ಪೌಚ್ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಪಟ್ಟಣ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಪಿಐ ಕೆ.ಹೊಸಕೇರಪ್ಪ ತಿಳಿಸಿದ್ದಾರೆ. ದಾಳಿ ವೇಳೆ ಸಿಬ್ಬಂದಿ ಹನುಮಂತ, ಅಮರೇಶ, ಗೋಪಾಲ್‌ಸಿಂಗ್ ಇದ್ದರು.