ಮದ್ಯವ್ಯಸನದಿಂದ ಕೌಟುಂಬಿಕ ಕಲಹ : ಗುರುಬಸಪ್ಪ ಸಜ್ಜನಶೆಟ್ಟಿ

ಕಲಬುರಗಿ:ಮೇ.21: ಮದ್ಯವ್ಯಸನದಿಂದ ಕೌಟುಂಬಿಕ ಜೀವನ ಕಲಹದಿಂದ ಹಾಳಾಗುತ್ತಿದೆ, ಸಮಾಜದಲ್ಲಿ ದುಶ್ಚಟದಿಂದ ಹೆಂಡತಿ ಮಕ್ಕಳು, ಅಣ್ಣ ತಮ್ಮ, ತಂದೆ ತಾಯಿಗಳ ಸಂಬಂಧಗಳು ಹಾಳಾಗುತ್ತಿವೆ. ನಾವು ಸರಳ ಜೀವನ ಮಾಡಿಕೊಳ್ಳಬೇಕು. ಆಡಂಬರ ಜೀವನ ಸಂಸ್ಕಾರಕ್ಕೆ ಮಾರಕವಾಗುತ್ತದೆ. ನೀವು ಕೆಲಸದಲ್ಲಿ ಮಗ್ನರಾದರೆ ಯಾವ ಚಟವು ಕಲಿಯುವುದಿಲ್ಲ, ಒಳ್ಳೆಯ ಜೀವನ ನಡೆಸಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ತಾಲೂಕ ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಮಾರ್ಗದರ್ಶನ ನೀಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಲಬುರಗಿ, ತಾಲೂಕ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಮತ್ತು ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮಧ್ಯವರ್ಜನ ಶಿಬಿರ ವ್ಯವಸ್ಥಾಪಕ ಸಮಿತಿ ರಾಮ ಮಂದಿರ, ದಕ್ಷಿಣ ಕನ್ನಡ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ, ವಿಶ್ವ ವಿದ್ಯಾಲಯ ಆರಕ್ಷಕ ಠಾಣೆ, ನಾಲ್ಕು ಚಕ್ರ ಚಾರಿಟೇಬಲ್ ಟ್ರಸ್ಟ್ ಇನ್ನೂ ಹಲವಾರು ಸಂಯೋಗದೊಂದಿಗೆ ಕಲಬುರಗಿಯ ಜೆ.ಡಿ ಬಡಾವಣೆಯ ಔಷಧ ಭವನದಲ್ಲಿ ನಡೆದ 1657ನೇ ಮಧ್ಯವರ್ಜನ ಶಿಬಿರದಲ್ಲಿ ಸಂಪನ್ಮೂಲ ವ್ಯಕಿಗಳಾಗಿ ಸಜ್ಜನಶೆಟ್ಟಿಯವರು ಉಪನ್ಯಾಸ ನೀಡಿದರು.
ನವಜೀವನ, ಸಮಿತಿ ಅನಿಸಿಕೆ, ಗುಂಪು ಸಲಹೆ, ಕೌಟುಂಬಿಕ ಸಲಹೆ, ಗಣ್ಯರಿಂದ ಮಾಹಿತಿ, ಸಾಂಸ್ಕøತಿಕ ಮತ್ತು ಭಜನೆ ಕಾರ್ಯಕ್ರಮಗಳು ದಿ.ಮೇ 24ರವರೆಗೆ ಶಿಬಿರಾರ್ಥಿಗಳಿಗೆ ದುಶ್ಚಟ ಬಿಡುವುದು ಹೇಗೆ ಎಂದು ಮಾಹಿತಿ ನೀಡುವರು. ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಲ್ಲೇರಾವ್ ಮಲ್ಲೆ, ಡಾ.ನಿರ್ಮ¯ ಕೆಳಮನೆ, ಶ್ರೀಮತಿ.ರಂಜಿನಿ ಜಗದೀಶ ಪಾಟೀಲ, ಶ್ರೀ ಮಾದವಯ್ಯ ಕರದಳ್ಳಿ, ಶ್ರೀ ಸಿ.ಎನ್,ಬಾಬಲಗಾವ ಇನ್ನೂ ಇತರರು ಉಪಸ್ಥಿತರಿದ್ದರು. ಪ್ರವೀಣ್ ಕ್ಷೇತ್ರ ಯೋಜನಾಧಿಕಾರಿಗಳು, ಶ್ರೀಮತಿ ಶ್ರೀದೇವಿ ಅವರು ಪ್ರಾರ್ಥನಾ ಗೀತೆ, ಕೃಷಿ ಅಧಿಕಾರಿ ಗಂಗಾಧರ್ ಸ್ವಾಗತಿಸಿದರು, ಶ್ರೀಮತಿ ಸುಮಿತ್ರಾ ಹಿರೇಮಠ ನಿರೂಪಣೆ ಮತ್ತು ಶ್ರೀಮತಿ ಮಂಜುಳಾ ವಂದಿಸಿದರು.