ಮದ್ಯಪಾನ ಬಿಟ್ಟರೆ ಜೀವನ ಸಾರ್ಥಕ: ಶಾಸಕ ಬಿ.ದೇವೇಂದ್ರಪ್ಪ 

ಸಂಜೆವಾಣಿ ವಾರ್ತೆ

ಜಗಳೂರು.ಜು.೨೬: ನಾನು ಸಹ 40 ವರ್ಷಗಳ ಕಾಲ ಮದ್ಯದ ದಾಸನಾಗಿದ್ದೆ. ಆದರೆ ಅದೆನ್ನೆಲ್ಲಾ ಬಿಟ್ಟು ನಾಲ್ಕು ವರ್ಷಗಳೇ ಕಳೆದಿವೆ. ನನ್ನ ಇಬ್ಬರೂ ಮಕ್ಕಳನ್ನು ಉನ್ನತ ವಿದ್ಯಾಭ್ಯಾಸ ಮಾಡಿಸಿದ್ದೇನೆ. ಇಂದು ನಾನು ಜನರ ಆಶಿರ್ವಾದದಿಂದ ಶಾಸಕನಾಗಿದ್ದೇನೆ. ದಯಮಾಡಿ ಮದ್ಯ ಸೇವನೆ ಮಾಡಬೇಡಿ ಎಂದು ಮದ್ಯವೆಸನಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಮನವಿ ಮಾಡಿದರು. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಜಗಳೂರು ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯಕ್ತ ಆಶ್ರಯದಲ್ಲಿ ಎಂಟು ದಿನಗಳ ಕಾಲ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜನೆ ಮಾಡಿರುವ 1691ನೇ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನÁಡಿದರು. ನಾವೆಲ್ಲರೂ ಪರಿಸರದ ಕೂಸು. ನಮ್ಮ ಮೇಲೆ ಅನೇಕ ಘಟನೆಗಳು ಪ್ರಭಾವ ಬೀರುತ್ತವೆ. ಸುಳಿಯಲ್ಲಿ ಗೆದ್ದು ದಡ ಸೇರುಬೇಕಾದರೆ ಮೊದಲು ಮದ್ಯವೆಸನ ತೆಜಿಸಬೇಕು. ಆದರೆ ಎದ್ದು ಬರುವ ಜನರಿಗಿಂತ ಸುಳಿಯಲ್ಲೇ ಸಿಲುಕುವ ಮಂದಿಯೇ ಹೆಚ್ಚು. ನಿಮಗೆ ಧೈರ್ಯ ಬೇಕು, ಮಾರ್ಗ ದರ್ಶನ ಬೇಕು. ಈ ಸತ್ಕಾರ್ಯವನ್ನು ಶ್ರಿ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಂಪತಿ ಮಾಡುತ್ತಿರುವುದು ಶ್ಲಾಘನೀಯ ಎಂದರು. ಮನುಷ್ಯನಿಗೆ ಕ್ರೂರ ಪ್ರಾಣಿಗಳನ್ನು ಪಳಗಿಸುವ ಸಾಮಥ್ರ‍್ಯವಿದೆ. ಆದರೆ ನಮ್ಮೊಳಗಿನ ಮನಸ್ಸು ನಿಯಂತ್ರಣ ಮಾಡುವ ಶಕ್ತಿ ಮನುಷ್ಯನಿಗಿಲ್ಲ. ಸಪ್ತ ವ್ಯಸನದಲ್ಲಿ ಮೊದಲನೆಯದು ಮದ್ಯಪಾನ ಬಿಟ್ಟರೆ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತದೆ. ಮನಸ್ಸಿಗಿಂತ ದೊಡ್ಡದು ಯಾವುದು ಇಲ್ಲ. ಎಷ್ಟೋ ಜನಕ್ಕೆ ಕುಡಿದಾಗ ಪರಿಜ್ಞಾನವೇ ಇರುವುದಿಲ್ಲ. ಸಂಬAಧಗಳ ಅರಿವೇ ಇರುವುದಿಲ್ಲ. ಈಗ ಬದುಕು ಬದಲಾಯಿಸುವ ಕಾಲ ಬಂದಿದೆ. ಮನಸ್ಸಿಗೆ ಅಂಟಿರುವ ಪೊರೆ ಕಳಚಲು ಇದೊಂದು ವೇದಿಕೆಯಾಗಿದೆ ಎಂದು ಮದ್ಯ ವೆಸನಿಗಳಿಗೆ ಕಿವಿ ಮಾತು ಹೇಳಿದರು. ಮದ್ಯವರ್ಜನ ಶಿಬಿರದಲ್ಲಿ ಶಾಸಕ ದೇವೇಂದ್ರಪ್ಪ ಅವರು ಭಜನೆ ಹಾಡಿದ್ದು ಎಲ್ಲರ ಗಮನ ಸೆಳೆಯಿತು. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಭಜನೆ ಹಾಡಿಗೆ ನೃತ್ಯ ಮಾಡಿಸುವ ಮೂಲಕ ದೈಹಿಕ ಕಸರತ್ತು ನೀಡಿ ಆರೋಗ್ಯಕರ ವ್ಯಕ್ತಿಯನ್ನಾಗಿ ಮಾಡಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾರ್ಯಕ್ಕೆ ಶಾಸಕರು ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮಧ್ಯವರ್ಜನ ಸಮಿತಿ ಅಧ್ಯಕ್ಷರು, ತಾಕಾನಿ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ಧೇಶಕ ಜನಾರ್ಧನ್ ಎಸ್., ಯೋಜನಾಧಿಕಾರಿ ಗಣೇಶ್‌ನಾಯ್ಕ್, ಪ.ಪಂ.ಮಾಜಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಖಾನ್, ಪಲ್ಲಾಗಟ್ಟೆ ಶೇಖರಪ್ಪ, ಸಮಿಯ ಪದಾಧಿಕಾರಿಗಳಾದ ರೇವಣ್ಣ, ಲೋಕೇಶ್, ಚಿಕ್ಕಮ್ಮನಹಟ್ಟಿ ಮಂಜುನಾಥ್, ಹೊನ್ನೂರ್‌ಸ್ವಾಮಿ, ಮೇಲ್ವಿಚಾರಕ ಮಂಜುನಾಯ್ಕ್, ಶಿಭಿರಾಧಿಕಾರಿ ನಾಗೇಂದ್ರ, ವೈಧ್ಯರಾದ ಉಮೇಶ್, ವಿಶಾಲ್, ಯೋಗಶಿಕ್ಷಕರಾದ ಶಾಂತಕುಮಾರ್, ಆರೋಗ್ಯ ಸಹಾಯಕ ವೆಂಕಟೇಶ್, ನಾಗರಾಜ್ ಸೇರಿದಂತೆ ಇತರರು ಇದ್ದರು.