ಮದ್ಯಪಾನಕ್ಕೆ ಹಣ ನೀಡದ ತಂದೆ ಕೊಂದ ಮಗ

ಬೆಂಗಳೂರು,ಏ.೨೭-ಮದ್ಯಪಾನಕ್ಕೆ ಹಣ ನೀಡದ್ದಕ್ಕೆ ಆಕ್ರೋಶಗೊಂಡ ಮಗ ಸ್ವಂತ ತಂದೆಯನ್ನೇ ಇಟ್ಟಿಗೆಯಿಂದ ಹೊಡೆದು ಕೊಲೆಗೈದಿರುವ ಅಮಾನುಷ ಘಟನೆ ಗೋವಿಂದರಾಜನಗರದ ಮಾರೇನಹಳ್ಳಿ ಪಿ. ಎಸ್ ಲೇಔಟ್?ನಲ್ಲಿ ನಡೆದಿದೆ. ಸೆಕ್ಯೂರಿಟಿಗಾರ್ಡ್ ಬಸವರಾಜು(೬೦) ಕೊಲೆಯಾದವರು,ಕೃತ್ಯ ನಡೆಸಿದ ಅವರ ಪುತ್ರ ಆಟೋ ಚಾಲಕನಾಗಿದ್ದ ನೀಲಧರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮಾರೇನಹಳ್ಳಿ ಪಿ. ಎಸ್ ಲೇಔಟ್‌ನಲ್ಲಿ ಮಗ ಹಾಗೂ ತಂದೆ ಇಬ್ಬರು ವಾಸವಾಗಿದ್ದರು ಮದ್ಯದ ಚಟ ಅಂಟಿಸಿಕೊಂಡಿದ್ದ ನೀಲಧರ್ ಸರಿಯಾಗಿ ಕೆಲಸಕ್ಕೆ ಹೋಗದೇ ತಂದೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದ.
ಕೆಲ ದಿನಗಳ ಹಿಂದೆ ಮದ್ಯಪಾನಕ್ಕೆ ಹಣ ನೀಡುವಂತೆ ಪೀಡಿಸಿದ್ದು ಕೊಡದಿದ್ದರಿಂದ ಶೆಡ್‌ನಲ್ಲಿ ಇಟ್ಟಿಗೆಯಿಂದ ತಲೆಗೆ ಹೊಡೆದು ತಂದೆಯನ್ನು ನೀಲಧರ್ ಕೊಲೆ ಮಾಡಿದ್ದಾನೆ. ಕೊಲೆಯಾಗಿ ೧೫ ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಗೋವಿಂದರಾಜ ನಗರ ಪೊಲೀಸರಿಗೆ ಮಗನಿಂದಲೇ ತಂದೆ ಕೊಲೆಯಾಗಿರುವುದು ಪತ್ತೆಯಾಗಿದ್ದು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ ಎಂದರು.