ಮದ್ಯದ ಅಂಗಡಿ ಪರವಾನಗೆ ರದ್ದಿಗೆ ಪ್ರತಿಭಟನೆ

ರಾಯಚೂರು, ಆ.೦೩-ಮದ್ಯದ ಅಂಗಡಿಗಳಿಗೆ ನೀಡಿರುವ ಪರವಾನಿಗೆ ರದ್ದು ಪಡಿಸುವಂತೆ ಆಗ್ರಹಿಸಿ ಸಿಪಿಐಎಂಎಲ್ ರೆಡ್ ಸ್ಟಾರ್ ಜಿಲ್ಲಾ ಪದಾಧಿಕಾರಿಗಳು ನಗರದ ಅಂಚೆ ಕಚೇರಿ ಮುಖಾಂತರ ಪತ್ರಚಳುವಳಿ ಕೈಗೊಂಡು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ರಾಜ್ಯದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಸರ್ಕಾರದ ಮಂಜೂರಾತಿ ಪ್ರಸ್ತಾವನೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯದ ಅಂಚೆ ಕಚೇರಿ ಮುಖಾಂತರ ಪತ್ರವನ್ನು ರವಾನಿಸಲಾಯಿತು.
ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಅಂಚೆ ಚಳುವಳಿ ನಡೆಸಿದರು,
ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಅಬಕಾರಿ ಇಲಾಖೆಯ ನಿರ್ಧಾರ ಸಿಪಿಐ ಎಂಎಲ್ ರೆಡ್ ಸ್ಟಾರ್ ಪಕ್ಷ ಉಗ್ರವಾಗಿ ಖಂಡಿಸುತ್ತದೆ ಈಗಾಗಲೇ ಮದ್ಯಪಾನದ ದುಶ್ಚಟದಿಂದ ಲಕ್ಷಾಂತರ ಕುಟುಂಬಗಳು ಬೀದಿ ಪಾಲಾಗಿವೆ. ಒಂದೆಡೆ ಬೆಲೆ ಏರಿಕೆ, ಬಡತನ, ನಿರುದ್ಯೋಗದಿಂದ ಜೀವನ ತತ್ತರಿಸುತ್ತಿದ್ದರೆ. ಇನ್ನೊಂದೆಡೆ ರಾಜ್ಯದ ಜನರ ನೈತಿಕ ಮೌಲ್ಯ ಕುಸಿಯುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ಹಾಗೂ ಅತ್ಯಾಚಾರಿಗಳು ಹೆಚ್ಚಳಕ್ಕೆ ಮದ್ಯಪಾನಪವು ಒಂದು ಮುಖ್ಯ ಕಾರಣ ಎಂದು ಮಾಧ್ಯಮದ ವರದಿಗಳು ಸಾಬೀತುಪಡಿಸುತ್ತಲೇ ಇವೆ. ಇಂತಹದರಲ್ಲಿ ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ನಿರ್ಧಾರ ಸಮಂಜಸವಾದದ್ದಲ್ಲ ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷ ಈ ಅಂಚೆ ಪತ್ರ ಚಳುವಳಿ ಮುಖಾಂತರ ಆಕ್ರೋಶ ವ್ಯಕ್ತಪಡಿಸುತ್ತದೆ.
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಹೊಸದಾಗಿ ಹೆಚ್ಚಿನ ಮದ್ಯದ ಅಂಗಡಿಗಳನ್ನು ತೆರೆಯಲು ತಯಾರಿ ನಡೆಸಿದೆ
ಕರ್ನಾಟಕ ಸರ್ಕಾರ ಆರ್ಥಿಕ ಸಂಪನ್ಮೂಲ ಕ್ರೂಡೀಕರಿಸಲು ಇಂತಹ ಮಾರ್ಗ ಆಯ್ಕೆ ಮಾಡಿದ್ದು ಸರಿಯಾದುದಲ್ಲ. ಇದು ಸರಿಯಾದ ಆಯ್ಕೆಯಲ್ಲಾ ಎಂದು ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷವು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ:ಆರ್.ಹುಚ್ಚ ರೆಡ್ದಿ, ಜಿ ಅಮರೇಶ್, ಅಜೀಜ್ ಜಾಗೀರ್ದಾರ್, ಸೈಯದ್ ಅಬ್ಬಾಸ್ ಅಲಿ, ಮಲ್ಲಯ್ಯ ಕಟ್ಟಿಮನಿ, ನಿರಂಜನ್, ಲಕ್ಷ್ಮಣ ಸೇರಿದಂತೆ ಉಪಸ್ಥಿತರಿದ್ದರು.