ಮದ್ಯದಂಗಡಿ ಪರವಾನಿಗೆ ಹೆಚ್ಚಳಕ್ಕೆ ಖಂಡನೆ

ಕಲಬುರಗಿ ಅ 3: ರಾಜ್ಯ ಸರಕಾರ ಹೆಚ್ಚಿನ ಆದಾಯಕ್ಕಾಗಿ ಒಂದು ಸಾವಿರ ಹೊಸ ಮದ್ಯದಂಗಡಿ ಪರವಾನಿಗೆ ನೀಡಲು ಮುಂದಾಗಿದ್ದು ಖಂಡನೀಯ ಎಂದು ಕರವೇ,ಕಾವಲುಪಡೆ ಸಂಘಟನೆ ರಾಜ್ಯ ವಕ್ತಾರ ಮಂಜುನಾಥ ನಾಲವಾರಕರ್ ಹೇಳಿದ್ದಾರೆ.
ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದು,ಮಹಾತ್ಮಾ ಗಾಂಧೀಜಿ ಅವರ ಹಾದಿಯಲ್ಲಿ ನಡೆಯಬೇಕು.ಆದರೆ ರಾಜ್ಯದಲ್ಲಿ ಸುಮಾರು ಗ್ಯಾರಂಟಿಗಳು ಜನರಿಗೆ ನೀಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಜನರಿಗೆ ನಶೆ ಮಾಡುವ ಗ್ಯಾರಂಟಿ ನೀಡಲು ಮದ್ಯದಂಗಡಿ ಪ್ರಾರಂಭ ಮಾಡಲು ಸೂಚನೆ ನೀಡುತ್ತಿರುವದನ್ನು ಕೈ ಬಿಡಬೇಕು. ಜನರಿಗೆ ಮೂಲಭೂತ ಸೌಕರ್ಯಗಳ ನೀಡಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವರಲ್ಲಿಮನವಿ ಮಾಡಿದ್ದಾರೆ