ಮದ್ಧಿನ ಖಣಿ ಸ್ಲಂ ನಿವಾಸಿಗಳಿಗೆ ಮನೆಗಳ ಖರೀದಿ ಪತ್ರ ವಿತರಣೆ

  ವಿಜಯಪುರ :ಜೂ.14: ಮದ್ದಿನ ಖಣಿ ಸ್ಲಂ ಅಭಿವೃದಿ ಸಮಿತಿ ಮತ್ತು ಅನೌಪಚಾರಿಕ ಶಿಕ್ಷಣ ಸಂಸ್ಥೆ, ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ(ರಿ), ವಿಜಯಪುರ ನಗರ ಜನ ವೇದಿಕೆ (ಅಅಈಈ) ಇವರ ಸಹಯೋಗದಲ್ಲಿ ಸ್ಲಂ ಮನೆಗಳಿಗೆ ಕರ್ನಾಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮದ್ದಿನ ಖಣಿ ಸ್ಲಂ ನಿವಾಸಿಗಳಿಗೆ ಖರೀದಿ ಪ್ರಮಾಣ ಪತ್ರ ವಿತರಣೆ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಮನೆಯ ಮುಂದೆ ಹಚ್ಚುಲು ಹಣ್ಣಿನ ಗಿಡಗಳು ಹಂಚುವ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮ ಗಿಡ ಹಂಚುವುದರ ಮೂಲಕ ಹಾಗೂ ಖರೀದಿ ಪತ್ರವಿತರಣೆ ಮಾಡುವುದರ ಮೂಲಕ ಉದ್ಗಾಟಿಸಲಾಯಿತು.
ಪ್ರಾಸ್ತವಿಕವಾಗಿ ಮಾತನಾಡಿದ ನಿರ್ಮಲ ಹೊಸಮನಿ ಇವರು ಮಾತನಾಡುತ್ತಾ  ಸಂಸ್ಥೆ, ಹಾಗೂ ಸ್ಲಂ ಸಮಿತಿ  ಒಕ್ಕೂಟದಿಂದ ಪ್ರತಿ ವರ್ಷ ಪರಿಸರ ದಿನಾಚರಣ ಆಚರಿಸುತ್ತೇವೆ, ಹಾಗೂ ಗಿಡಗಳ ಹಂಚಿಕೆ ಮಾಡುತ್ತೇವೆ, ಗಿಡ ನಮ್ಮ ಆರೋಗ್ಯಕ್ಕೆ ಅತ್ಯಅವಶ್ಯಕ  ಆದ್ದರಿಂದ ಪರಿಸರ ದಿನಾಚರಣೆ ಆಚರಿಸುತ್ತಾ ಇದ್ದು, ಎಡನೆಯದಾಗಿ ನಮ್ಮ ಸ್ಲಂಮಿನ ಎಲ್ಲ ನಿವಾಸಿಗಳು ಹಕ್ಕು ಪತ್ರಗಳು ಪಡೆದುಕೊಂಡಿದ್ದು ಅವುಗಳ ಹಿರಿಯ ನೊಂದಣಿ ಅಧಿಕಾರಿಗಳ ಇಲಾಖೆಗೆ  ನೊಂದಾಯಿಸಿ ಖರೀದಿ ಪತ್ರಗಳು ದೊರಕಿವೆ.  ಅವುಗಳು  ಸಹ ಈ ಸಂದರ್ಬದಲ್ಲಿ ವಿತರಣೆಯಾಗಲಿವೆ ಎಂದು ಹೇಳಿ ತಮ್ಮ ಪ್ರಾಸ್ಥಾವಿಕ ನುಡಿಗೆ ವಿರಾಮ ಹೇಳಿದರು.
  ಕರ್ನಾಟಕ ಕೊಳಗೇರಿ ಅಭಿವೃಧ್ದಿ ಮಂಡಳಿ ಸಹಾಯಕ ಅಭಿಯಂತರಾದ  ಸಸಾಲಟಿ ಇವರು  ಪರಿಸರ ದಿನಾಚರಣೆ ಅಂಗವಾಗಿ ಸಸಿಗಳನ್ನು ಹಂಚಿದರು, ನಂತರ ಮದ್ದಿನ ಖಣಿ ಸ್ಲಂ ನಿವಾಸಿಗಳಿಗೆ ಹಿರಿಯ ನೊಂದಣಿ ಅಧಿಕಾರಿಗಳಿಂದ ಪಡೆದಿರುವ ಖರೀದಿ ಪತ್ರ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ  ನಗರದ ಘೋಷಣೆಯಾಗಿರುವ ಎಲ್ಲ ಸ್ಲಂ ನಿವಾಸಿಗಳ ಪತ್ರಿ ಮನೆಗೆ ಹಕ್ಕು ಪತ್ರ ಕೊಡಲಾಗಿದ್ದು  ಹಕ್ಕು ಪತ್ರಗಳು ಹಿರಿಯ ನೊಂದಣಿ ಅಧಿಕಾರಿಗಳ ಇಲಾಖೆಗೆ ನೊಂದಣಿ ಮಾಡಿ ಅವರು ವಾಸಿಸುವ ಮನೆಯನ್ನು  ಖರೀದಿ ಮಾಡಿಕೊಂಡಿದ್ದು  ಅವುಗಳ ಪ್ರಮಾಣ ಪತ್ರ ವಿತರಣೆ ಯಾಗಿದ್ದು  ಆದಷ್ಟು ಬೇಗನೆ ಎಲ್ಲರು  ಹಕ್ಕು ಪತ್ರ ಪಡೆದು ನೊಧಂಣಿ ಮಾಡಿಸಿಕೊಳ್ಳಿ ಎಂದು ಕರೆ ನೀಡಿ ತಮ್ಮ ಮಾತನ್ನು ಮುಗಿಸಿದರು
 ಈ ಸಂದರ್ಬದಲ್ಲಿ ಲಕ್ಷ್ಮಿ ಕನ್ನೂಳ್ಳಿ ಮಾಜಿ  ಮಹಾನಗರ ಪಾಲಿಕೆ ಸದಸ್ಯರು,  ದೈಹಿಕ ಶಿಕ್ಷಕರಾದ ಕೃಷ್ಣಾ ಬಂಡಿವ್ಡರ, ನಿರ್ಮಲಾ ಹೊಸಮನಿ,ಮಾಜಿ ಮಹಿಳಾ ಒಕ್ಕೂಟದ ಅಧ್ಯಕ್ಷರು, ಸ್ಲಂ ಅಭಿವೃದ್ದಿ ಸಮಿತಿ ಒಕ್ಕೂಟದ ಸದಸ್ಯರಾದ ಮುತ್ತು ಬೋವಿ, ವಯೋವೃದ್ದರ ಸಂಘದ ಅಧ್ಯಕ್ಷರಾದ  ಲಕ್ಷ್ಮಣ  ನರಳೆ, ಹಾಗೂ ಸ್ಲಂಮಿನ ಎಲ್ಲ ನಿವಾಸಿಗಳು ಹಾಜರಿದ್ದರು. ಈ ಕಾರ್ಯಕ್ರಮಕ್ಕೆ ರೇಷ್ಮಾ ಬಂಡಿವಡ್ಡರ ಸ್ವಾಗತಿಸಿದರು  ಕುಮಾರಿ ತನು ನರಳೆ ನಿರೊಪಿಸಿದರು, ಕುಮಾರಿ ಮೇಘಾ ಬಜಂತ್ರಿ ವಂದಿಸಿದರು.