ಮದುವೆ ಸ್ಥಳಕ್ಕೆ ಎಸಿ ಭೇಟಿ ಪರಿಶೀಲನೆ

ಬಾಗಲಕೋಟೆ, ಮೇ 2 : ನವನಗರದ ವಿವಿಧ ಸೆಕ್ಟರ್‍ಗಳಲ್ಲಿ ಆಯೋಜಿಸಲಾದ ಮದುವೆ ಕಾರ್ಯಕ್ರಮಕ್ಕೆ ಉಪವಿಭಾಗಾಧಿಕಾರಿ ಎಂ. ಗಂಗಪ್ಪ ಭೇಟಿ ನೀಡಿ ಸರಕಾರದ ಮಾರ್ಗಸೂಚಿ ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಶನಿವಾರ ನವನಗರದ ಸೆಕ್ಟರ್ ನಂ.63ರ ಉತ್ತರಾಧಿಮಠದ ಸತ್ಯಬೋಧರಾಯರ ಸಭಾಭವನ ಹಾಗೂ ಸೆಕ್ಟರ್ ನಂ.26 ರಲ್ಲಿ ಆರೋಹಿಸಲಾದ ಮದುವೆ ಸ್ಥಳಕ್ಕೆ ಭೇಟಿ ನೀಡಿದಾದ ಸರಕಾರದ ಮಾರ್ಗಸೂಚಿ ಪಾಲನೆಯಾದ ಕುರಿತು ಹರ್ಷ ವ್ಯಕ್ತಪಡಿಸಿದರು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದ್ದು, ಉಳಿದ ಮದುವೆ ಕಾರ್ಯದಲ್ಲಿಯೂ ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು 50 ಜನಕ್ಕಿಂತಲೂ ಕಡಿಮೆ ಜನ ಸೇರಿ ಮದುವೆ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.
ಭೇಟಿ ಪೂರ್ವದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಕರ ಜೊತೆ ಸಭೆ ಜರುಗಿತು. ಕೊರೊನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕ ಪತ್ತೆ ಹಚ್ಚುವ ಬಗ್ಗೆ ತಿಳಿಸಲಾಯಿತು.