ಮದುವೆ ಸಮಾರಂಭ: ಕೋವಿಡ್ ನೋಡಲ್ ಅಧಿಕಾರಿ ಭೇಟಿ

ಚಿಂಚೋಳಿ ಮೇ 16: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭ ಕಾರ್ಯಕ್ರಮಕ್ಕೆ ಶಿಶು ಅಭಿವೃದ್ಧಿ ಅಧಿಕಾರಿ ಮತ್ತು ಕೋವಿಡ್ 19 ನೋಡಲ್ ಅಧಿಕಾರಿಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಂತರ ಅವರು ಮದುವೆ ಸಮಾರಂಭ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು ಸರ್ಕಾರ ಆದೇಶದಂತೆ ಮದುವೆ ಸಮಾರಂಭದಲ್ಲಿ ಪಾಲನೆ ಮಾಡಬೇಕೆಂದು ಅವರು ಹೇಳಿದರು. ಮದುವೆ ಸಮಾರಂಭದಲ್ಲಿ ಇರುವ ಎಲ್ಲಾ ನಾಗರಿಕರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಮತ್ತು ಸ್ಯಾನಿಟೈಜರ್ ಉಪಯೋಗಿಸಬೇಕು ಹಾಗೂ ಆರಡಿ ಅಂತರ ಕಾಪಾಡಬೇಕು ಮದುವೆ ಸಮಾರಂಭಕ್ಕೆ ಆಗಮಿಸಿದ ಜನರಲ್ಲಿ ಕೋರೋನ ಸೋಂಕು ಹರಡದಂತೆ ಜನರು ಜಾಗೃತ ಇರಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಸುಲೇಪೇಟ್ ಪೆÇಲೀಸ್ ಸಿಬ್ಬಂದಿ ಇರ್ಫಾನ್ ಇದ್ದರು