ಮದುವೆ ಸಮಾರಂಭ:ಸಾಮಾಜಿಕ ಅಂತರ ಮರೆತ ಜನ

ರಾಯಚೂರು.ಏ.೨೯.ಸಾಮಾಜಿಕ ಅಂತರ ಮರೆತು ಸಾರ್ವಜನಿಕರು ಮದುವೆಯಲ್ಲಿ ಬಾಗವಹಿಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಮಾಣಿಕ್ ಪ್ರಭು ದೇವಸ್ಥಾನದ ಹತ್ತಿರ ನಗರದ ನಿವಾಸಿಯೊಬ್ಬರ ಮದುವೆ ಸಮಾರಂಭದಲ್ಲಿ ೧೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದಾರೆ.ಕೊರೊನ ಎರಡನೇ ಅಲೆ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದು ರಾಜ್ಯಸರ್ಕಾರ ೧೪ ದಿನಗಳ ಲಾಕ್ ಡೌನ್ ಜಾರಿಮಾಡಿದೆ.
ಮದುವೆ ಸಮಾರಂಭವನ್ನು ನಡೆಸಲು ಅಲವರು ಷರತ್ತುಗಳನ್ವಯಗಳೊಂದಿಗೆ ಕೇವಲ ೫೦ ಜನರಿಗೆ ಮಾತ್ರ ಅನುಮತಿ ನೀಡಿದ್ದು ಆದರೆ ಇಂದು ನಗರದಲ್ಲಿ ವಿವಿಧ ಕಲ್ಯಾಣ ಮಂಟಪದಲ್ಲಿ ಮದುವೆಗಳು ನಡೆಯುತ್ತಿವೆ ಆದರೆ ಮಾಣಿಕ್ ಪ್ರಭು ದೇವಸ್ಥಾನದ ಹತ್ತಿರ ಇರುವ ಬನ್ನಿ ಮಂಟಪದಲ್ಲಿ ಹಳ್ಳಿ ಮತ್ತು ನಗರ ಪ್ರದೇಶದಿಂದ ಆಗಮಿಸಿದ ಜನರು ಸಾಮಾಜಿಕ ಅಂತರ ಮರೆತು ಮಾಸ್ಕ್ ದರಿಸದೆ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಸುತ್ತ ಮುತ್ತಲಿನ ಬಡಾವಣೆಯ ಜನರಿಗೆ ಕೊರೊನ ಆತಂಕ ಎದುರಾಗಿದ್ದು ಕಂಡು ಬಂದಿತು ವಿಷಯ ತಿಳಿದ ನೇತಾಜಿ ಪೊಲೀಸ್ ಠಾಣೆಯ ಅಧಿಕಾರಿಗಳು ಜನರನ್ನು ಚದುರಿಸಿದರು.