ಮದುವೆ ಸಮಾರಂಭದಲ್ಲಿ 9 ತೊಲೆ ಚಿನ್ನಾಭರಣ ಮಂಗಮಾಯ !

ಕಲಬುರಗಿ,ಜೂ.17-ಮದುವೆ ಸಮಾರಂಭಕ್ಕೆ ಬಂದಿದ್ದ ವೇಳೆ ಮಹಿಳೆಯೊಬ್ಬರ ಬ್ಯಾಗ್‍ನಲ್ಲಿದ್ದ 6,65,000 ರೂ.ಮೊತ್ತದ 9 ತೊಲೆ ಬಂಗಾರದ ಆಭರಣಗಳು ಕಳವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಯರಗೋಳ ಗ್ರಾಮದ ಸಮೀನಾ ಹಾಜಿಮಿಯ್ಯ ಎಂಬುವವರೆ ಚಿನ್ನಾಭರಣ ಕಳೆದುಕೊಂಡಿದ್ದಾರೆ.
ಇವರು ನಗರದ ಮುಸ್ಲಿಂ ಚೌಕ್‍ನಲ್ಲಿರುವ ಸಂಬಂಧಿಕರ ಮಗಳ ಮದುವೆ ಸಮಾರಂಭಕ್ಕೆ ಆಗಮಿಸಿದ್ದರು. ಈ ವೇಳೆ ಅವರ ಬ್ಯಾಗ್‍ನಲ್ಲಿ ಇರಿಸಿದ್ದ 6.65 ಲಕ್ಷ ರೂ.ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.