ಮದುವೆ ದಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾದರಿಯಾದ ಈ ಕುಟುಂಬ

ಕೊಟ್ಟೂರು, ಡಿ.24: ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಷ್ಟುವೈವಿಧ್ಯವೋ ಅಷ್ಟೇ ಪ್ರತಿಷ್ಠೆಯೂ ಹೌದು. ಆ ದಿನ ಸಾವಿರಾರು ಮಂದಿಯನ್ನು ಆಹ್ವಾನಿಸಿ ಊಟ ಹಾಕುವುದು ಸಂಪ್ರದಾಯ. ಆದರೆ ಪಟ್ಟಣದಲ್ಲಿ
ದಿ.ಡಾ.ಸಿದ್ದರಾಮಯ್ಯ ಕುಟುಂಬವೊಂದು ತಮ್ಮ ಕುಟುಂಬದ ಮದುವೆ ದಿನದಂದು ಹೆಚ್ಚು ಅಂಕಪಡೆದ 15ವಿದ್ಯಾರ್ಥಿಗಳಿಗೆ 5000 ಪ್ರೋತ್ಸಾಹಧನ ನೀಡಿ ಸನ್ಮಾನಮಾಡಿ ಮಾದರಿಯಾಗಿದ್ದಾರೆ. ಜೆ ಎಂ ಕೃಪ /ಎಂ.ವಿ.ಮಲ್ಲಿನಾಥ ಎಂಬ ದಂಪತಿಯ ವಿವಾಹ ಪ್ರಯುಕ್ತ ಪ್ರತಿಭಾ ಪುರಸ್ಕಾರ ಮಾಡಿ ತಮ್ಮ ವಿವಾಹ ದಿನವನ್ನು ಸ್ಮರಣೀಯವಾಗಿಸಿದ್ದಾರೆ.ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮಿಗಳು,
ಎಂ ಎಂ ಜೆ ಸ್ವರೂಪಾನಂದ, ಜೆ ಎಂ ಧನುಂಜಯ, ಬಿ ಎಂ ಪ್ರಭುದೇವ, ನಿವೃತ್ತ ಬಿ ಇ ಒ ಹಾಲಯ್ಯ ಸೇರಿದಂತೆ ಆನೇಕರು ಇದ್ದರು.ಶಿಕ್ಷಕರೇವಣರಾಧ್ಯ ನಿರೂಪಣೆ ಮಾಡಿದರು.