ಮದುವೆ, ತಿಥಿ, ಮುಂತಾದ ಕಡೆಗಳಲ್ಲಿ ದಾಳಿ: ಎಫ್‍ಐಆರ್ ದಾಖಲು

ಕೆ.ಆರ್.ಪೇಟೆ. ಜೂ.07: ತಾಲ್ಲೂಕಿನಲ್ಲಿ ಕೊರೋನಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಕೈಗೊಂಡಿದ್ದು ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಮದುವೆ, ಬೀಗರ ಔತಣ, ತಿಥಿ, ನಾಮಕರಣ, ಹುಟ್ಟುಹಬ್ಬ ಮುಂತಾದ ಕಡೆಗಳಲ್ಲಿ ದಾಳಿ ನಡೆಸಿ ಅವರ ವಿರುದ್ದ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ತಹಶಿಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.
ಅವರು ಪಟ್ಟಣದ ವೃತ್ತ ನಿರೀಕ್ಷಕರ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾಲ್ಕು ಮದುವೆಗಳ ಮೇಲೆ ದಾಳಿ
ತಾಲ್ಲೂಕು ಆಡಳಿತದ ಅನುಮತಿ ಪಡೆಯದೇ ವಿವಾಹ ಮಾಡುತ್ತಿದ್ದ ತಾಲ್ಲೂಕಿನ ಮುರುಕನಹಳ್ಳಿ, ಹರಿರಾಯನಹಳ್ಳಿ, ನಂದಿಪುರ, ಕ್ಯಾತನಹಳ್ಳಿ ಗ್ರಾಮಗಳ ವಿವಾಹ ಸಮಾರಂಭಗಳ ಮೇಲೆ ದಾಳಿ ನಡೆಸಲಾಯಿತು. ಅವರ ವಿರುದ್ದ ಎಫ್‍ಐಆರ್ ದಾಖಲಿಸಲಾಗಿದೆ.
ಮದುವೆ ಗಂಡು ಹೆಣ್ಣು ಅವರ ತಂದೆ ತಾಯಿಯ ವಿರುದ್ದ ಮೊಕದ್ದಮೆ
ಅನುಮತಿ ಪಡೆಯದೇ ಮದುವೆ ಮಾಡಿದರೆ ಮದುವೆ ಗಂಡು ಹೆಣ್ಣು, ಅವರ ತಂದೆತಾಯಿಗಳು,ಪುರೋಹಿತರು, ಮತ್ತು ಮದುವೆಯಲ್ಲಿ ಭಾಗವಹಿಸಿದ್ದವರ ವಿರುದ್ದ ಮೊಕದ್ದಮೆ ದಾಖಲು ಮಾಡಲಾಗುತ್ತದೆ. ಅವರು ಎμÉ್ಟೀ ಪ್ರಭಾವಿಗಳಾದರೂ ಅವರನ್ನು ರಕ್ಷಿಸುವ ಪ್ರಶ್ನೆಯಿಲ್ಲ ಎಂದರು.
ಬೆಳಗಿನ ಜಾವದ ಮದುವೆ ನಿಲ್ಲಿಸಿ
ತಾಲ್ಲೂಕು ಆಡಳಿತದ ಕಣ್ಣು ತಪ್ಪಿಸಿ ಬೆಳಗಿನ ಜಾವ 4-5 ಗಂಟೆಯ ವೇಳೆಯಲ್ಲಿ ಮದುವೆಗಳು ನಡೆಯುತ್ತಿರುವುದು ಕಂಡುಬಂದಿದ್ದು ಪೆÇಲೀಸರು ಸದಾ ಸಕ್ರಿಯವಾಗಿದ್ದು ದಾಳಿ ನಡೆಸಲಿದ್ದಾರೆ.
ಕೊರೋನಾದಿಂದ ಮೃತಪಟ್ಟವರ ಅದ್ದೂರಿ ತಿಥಿ
ಮಹಾಮಾರಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಕುಟುಂಬದವರು ನೂರಾರು ಜನರನ್ನು ಸೇರಿಸಿಕೊಂಡು ತಿಥಿ ಮಾಡಿತ್ತಿದ್ದು ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿಯಲ್ಲಿದೆ. ಆದ್ದರಿಂದ ಕುಟುಂಬದ ಸದಸ್ಯರು ಮಾತ್ರ ಸರಳವಾಗಿ ತಿಥಿ ಮಾಡಿಕೊಳ್ಳಬೇಕು ಸದ್ಯದ ಪರಿಸ್ಥಿತಿಯಲ್ಲಿ ಕಾನೂನಿನಲ್ಲಿ ತಿಥಿ ಮಾಡಲು ಅವಕಾಶವಿಲ್ಲ.
ಸ್ಟೇಟಸ್ ಆಧಾರದ ಮೇಲೆ ಮೊಕದ್ದಮೆ.
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಯುವಕರು,ಹಣವುಳ್ಳವರು ನಿμÉೀದಾಜ್ಞೆ ಉಲ್ಲಂಘಿಸಿ ಹುಟ್ಟುಹಬ್ಬದ ಆಚರಣೆ,ವಿವಾಹ ವಾರ್ಷಿಕೋತ್ಸವ ಮಾಡಿಕೊಂಡು ಅದನ್ನು ತಮ್ಮ ಸ್ಟೇಟಸ್ ಗೆ ಹಾಕಿಕೊಳ್ಳಿತ್ತಿರುವುದು ಕಂಡುಬಂದಿದ್ದು ಸ್ಟೇಟಸ್ ಆಧರಿಸಿ ಅಂಥಹವರ ವಿರುದ್ದ ಎಫ್ ಐ ಆರ್ ದಾಖಲಿಸಲಾಗುವುದು.
ವೈದ್ಯರ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಯಶಸ್ವಿ
ತಾಲ್ಲೂಕಿನಾದ್ಯಂತ ಕೊರೋನಾ ನಿಯಂತ್ರಿಸುವ ಸಲುವಾಗಿ ವೈದ್ಯರುಗಳು ತಮ್ಮ ಹೆಚ್ವಿನ ಶ್ರಮವಹಿಸಿ ಪ್ರತೀ ಗ್ರಾಮಕ್ಕೂ ತೆರಳಿ ಆರೋಗ್ಯ ತಪಾಸಣೆ ಮಾಡಿ ಸೋಂಕಿತರನ್ನು ಪತ್ತೆಮಾಡುವ ಕಾರ್ಯಕ್ರಮ ಕಳೆದ ಒಂದು ವಾರದಿಂದಲೂ ನಡೆಯುತ್ತಿದ್ದು ಬಹಳ ಯಶಸ್ವಿಯಾಗಿ ಜರುಗಿದೆ.ಶ್ರಮಿಸಿದ ಎಲ್ಲಾ ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಅಭಿನಂದನೆಗಳು.
ಸುದ್ದಿಗೋಷ್ಟಿಯಲ್ಲಿ ವೃತ್ತ ನಿರೀಕ್ಷಕ ಎಂ.ಕೆ.ದೀಪಕ್, ಗ್ರಾಮಾಂತರ ಠಾಣೆಯ ಪಿಎಸ್‍ಐ ಸುರೇಶ್, ಪೆÇ್ರಬೆಷನರಿ ಪಿಎಸ್‍ಐ ಕುಮುದ ಸೇರಿದಂತೆ ಇತರರು ಹಾಜರಿದ್ದರು.