ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!

ಬೀದರ್:ಎ.29: ಮದುವೆ ಆಮಂತ್ರಣ ಪತ್ರ ನೀಡಲು ಹೋಗಿದ್ದ ವಧು ಮತ್ತು ಆಕೆಯ ಸಹೋದರಿ ಇಬ್ಬರೂ ಸಾವಿಗೀಡಾಗಿರುವ ಪ್ರಕರಣವೊಂದು ನಡೆದಿದೆ. ಬೀದರ್ ಜಿಲ್ಲೆಯಲ್ಲಿ ನಡೆದ ಅಪಘಾತವೊಂದರಲ್ಲಿ ಇವರಿಬ್ಬರು ಸಾವಿಗೀಡಾಗಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಠಾ ಗ್ರಾಮದ ಬಳಿ ದ್ವಿಚಕ್ರವಾಹನಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ದ್ವಿಚಕ್ರವಾಹನದಲ್ಲಿದ್ದ ವಧು ಶ್ರದ್ಧಾ ಜುಲ್ಫೆ (22), ಈಕೆಯ ಸಹೋದರಿ ಸಂಸ್ಕøತಿ ಜುಲ್ಫೆ (19) ಸಾವಿಗೀಡಾವರು. ಇವರ ತಂದೆ ದಿಲೀಪ್ ಜುಲ್ಫೆ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶ್ರದ್ಧಾ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತೆರಳಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ದಿಲೀಪ್ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದವರು ಎಂದು ತಿಳಿದು ಬಂದಿದೆ. ಸಂತಪೂರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.