ಮದುವೆ ಅರತಕ್ಷತೆ ಮತ ಎಣಕೆ ಅಡ್ಡಿ

ರಾಯಚೂರು.ಡಿ.೩೦- ಪಂಚಾಯತ ಚುನಾವಣೆಯ ಮತ ಎಣಿಕೆ ಒಂದು ಕುಟುಂಬದ ಅರತಕ್ಷತೆ ಸಮಾರಂಭಕ್ಕೆ ಅಡ್ಡಿಯಾದ ಘಟನೆ ಇಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಎಲ್‌ವಿಡಿ ಕಾಲೇಜು, ಎಫ್‌ಡಿಎ ಸಿಬ್ಬಂದಿ ವೀರಯ್ಯ ಸ್ವಾಮಿ ಅವರ ಪುತ್ರಿಯ ಅರತಕ್ಷತೆ ಇಂದು ಮಧ್ಯಾಹ್ನ ಆಯೋಜಿಸಲಾಗಿತ್ತು. ಕಾಲೇಜಿನ ಮುಂಭಾಗದಲ್ಲಿರುವ ಕೃಷ್ಣ ಯಾದವ ಕಲ್ಯಾಣ ಮಂಟಪದಲ್ಲಿ ಈ ಅರತಕ್ಷತೆ ವ್ಯವಸ್ಥೆ ಮಾಡಲಾಗಿತ್ತು. ಅದರ ಹಿಂದೆ ಮತ ಎಣಿಕೆ ಇವರ ಅರತಕ್ಷತೆಯ ವ್ಯವಸ್ಥೆಯನ್ನೇ ಅಸ್ತವ್ಯಸ್ತಗೊಳಿಸಿತ್ತು. ಈ ಸಮಾರಂಭಕ್ಕೆ ಆಹ್ವಾನಿತರು ಆಗಮಿಸಲು ಸ್ಥಳವಿಲ್ಲದಂತೆ ಕಲ್ಯಾಣ ಮಂಟಪದ ಆವರಣದ ಸುತ್ತಮುತ್ತ ಆಹ್ವಾನವೇ ಇಲ್ಲದ ಗ್ರಾ.ಪಂ. ಮತ ಎಣಿಕೆ ವೀಕ್ಷಕರು ಸೇರಿದ್ದರಿಂದ ತೀವ್ರ ಗೊಂದಲಕ್ಕೆ ಕಾರಣವಾಯಿತು.
ಆಪ್ತರು ಮತ್ತು ಪರಿಚಿತರನ್ನು ಅರಕ್ಷತೆಗೆ ಆಹ್ವಾನಿಸುವ ಮೂಲಕ ನಿರ್ದಿಷ್ಟ ಸಂಖ್ಯೆಯ ಊಟದ ವ್ಯವಸ್ಥೆ ಆರಂಭಿಸುವ ಪೂರ್ವ ಭಾರೀ ಸಂಖ್ಯೆಯಲ್ಲಿ ಗ್ರಾ.ಪಂ. ಚುನಾವಣೆ ವೀಕ್ಷಣೆಗೆ ಜನರ ಆಗಮನದಿಂದ ಅರತಕ್ಷತೆ ಆಯೋಜಿಸಿದ ಕುಟುಂಬದವರು ಮುಂದೇನು ಎನ್ನುವಂತಹ ಗಂಭೀರ ಚಿಂತನೆಗೆ ಗುರಿಯಾಗುವಂತಾಗಿತ್ತು. ಅರತಕ್ಷತೆ ನಿರ್ವಹಿಸಿದರೇ, ಸಂಬಂಧವಿಲ್ಲದವರ ಊಟಕ್ಕೆ ಬಂದರೇ ಅಷ್ಟೋಂದು ಜನ ಸಂಖ್ಯೆಯ ನಿಯಂತ್ರಣ ಸಾಧ್ಯವೆ ಎಂದು ಯೋಚಿಸುವಂತಹ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು.
ಯಾವುದೇ ದಿಕ್ಕು ತೋಚದೇ, ಅರತಕ್ಷತೆಗೆ ಬಂದವರು ಕಲ್ಯಾಣ ಮಂಟಪದಲ್ಲಿ ಒಂದಷ್ಟು ಕಾಲ ಕಾಯುವುದು ಬಿಟ್ಟರೇ ಮತ್ಯೇನು ದಾರಿ ಎನ್ನುವ ಗೊಂದಲ ಮುಖಭಾವದೊಂದಿಗೆ ಕುಳಿತುಕೊಂಡಿರುವುದು ಕಂಡು ಬಂದಿತು.