ಮದುವೆ‌ ಕಾರ್ಡಿನ ತೂಕ ಕೇಳಿದರೆ ಯಾರಿಗಾದರೂ ಆಶ್ಚರ್ಯ

ಗಾಂಧಿನಗರ, ಡಿ.5- ಮದುವೆ ವಿವಿಧ ಬಗೆಯ ಹಾಗೂ ಹೊಸ ವಿನ್ಯಾಸದ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸುವುದು ಸಹಜ. ಆದರೆ ಗಾಂಧಿ ನಗರದಲ್ಲಿ ತನ್ನ ಮಗ ವಿವಾಹಕ್ಕೆ ತಂದೆಯೊಬ್ಬರು 4 ಕೆ.ಜಿ. 280 ಗ್ರಾಂ ತೂಕದ ಮದುವೆ ಕಾರ್ಡ್ ನಿರ್ಮಿಸಿದ್ದಾರೆ.
ಈ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ವಿವಾಹವನ್ನು ವಿಭಿನ್ನವಾಗಿ ಮಾಡಬೇಕು ಎಂಬ ಆಸೆ ಇರುವುದು ಸಹಜ . ಮದುವೆ ಗಾಗಿ ಲಕ್ಷಾಂತರ ಹಣ ಖರ್ಚು ಮಾಡುತ್ತಾರೆ.
ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಮಗನ ಮದುವೆಗೆ ಆಮಂತ್ರಣದ ಕಾರ್ಡ್ ಅನ್ನು ಭಿನ್ನವಾಗಿ ಮಾಡಿಸಿದ್ದು, ಆ ಕಾರ್ಡ್ 4 ಕೆಜಿಗಿಂತ ಹೆಚ್ಚು ತೂಕವಿದೆ. ಆ ಕಾರ್ಡ್‍ನ ಬೆಲೆ ಏನಾದರು ಕೇಳಿದರೆ ಜನರು ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ.
ಗುಜರಾತಿ ಉದ್ಯಮಿ ಮೌಲೇಶಭಾಯ್ ಉಕಾನಿ, ಸೋನಾಲ್ಬೆನ್ ಉಕಾನಿ ಅವರ ಮಗ ಜೇ ಉಕಾನಿ ಅವರ ವಿವಾಹಕ್ಕಾಗಿ 4 ಕೆಜಿ ಮತ್ತು 280 ಗ್ರಾಂ ತೂಕದ ಕಾರ್ಡ್ ಅನ್ನು ಮಾಡಿಸಿದ್ದಾರೆ.
ನವೆಂಬರ್ 14 ರಿಂದ 16 ರವರೆಗೆ ರಾಜಸ್ಥಾನದ ಜೋಧ್‍ಪುರದ ಉಮೈದ್ ಭವನ ಅರಮನೆಯಲ್ಲಿ ಈ ವಿವಾಹ ನಡೆದಿತ್ತು. ಈ ಮದುವೆ ಮುಗಿದು ಹೋಗಿದ್ದರೂ, ಆಮಂತ್ರಣ ಪತ್ರಿಕೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವುದಂತೂ ಸುಳ್ಳಲ್ಲ.