ಮದುವೆಯಾದ ೬ ವರ್ಷಗಳ ನಂತರ ೪೩ ವರ್ಷ ವಯಸ್ಸಿನ ಬಿಪಾಶಾ ಬಸು ಗರ್ಭಿಣಿ!

ಬಾಲಿವುಡ್‌ನ ಜನಪ್ರಿಯ ಜೋಡಿ ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಬಸು ಶೀಘ್ರದಲ್ಲೇ ಪೋಷಕರಾಗಲಿದ್ದಾರೆ. ಇಬ್ಬರೂ ಶೀಘ್ರದಲ್ಲೇ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಆದರೆ, ಈ ಬಗ್ಗೆ ಇಬ್ಬರೂ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ಇಬ್ಬರೂ ಶೀಘ್ರದಲ್ಲೇ ಈ ಶುಭ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿ ಕೊಳ್ಳಲಿದ್ದಾರಂತೆ. ಸದ್ಯ ಇಬ್ಬರೂ ಹ್ಯಾಪಿ ಸ್ಪೇಸ್‌ನಲ್ಲಿದ್ದಾರೆ.
ಬಿಪಾಶಾ( ಜನ್ಮ- ೦೭-೦೧-೧೯೭೯) ಮತ್ತು ಕರಣ್ ಅವರ ಹತ್ತಿರದ ಮೂಲಗಳು ಇಬ್ಬರೂ ಪ್ರಸ್ತುತ ಸಂತೋಷದಲ್ಲಿದ್ದಾರೆ ಮತ್ತು ಪೋಷಕರಾಗಲು ತುಂಬಾ ಉತ್ಸುಕರಾಗಿದ್ದಾರೆ ಎಂದು ಹೇಳಿವೆ. ಈ ದಂಪತಿ ೩೦ ಏಪ್ರಿಲ್ ೨೦೧೬ ರಂದು ಕುಟುಂಬ ಮತ್ತು ಸ್ನೇಹಿತರ ನಡುವೆ ವಿವಾಹ ಬಂಧದಲ್ಲಿ ಜೋಡಿಸಲ್ಪಟ್ಟಿದ್ದಾರೆ .
’ಅಲೋನ್’ ಫಿಲ್ಮ್ ನಲ್ಲಿ ಬಿಪಾಶಾ-ಕರಣ್ ಒಟ್ಟಿಗೆ ಕಾಣಿಸಿಕೊಂಡಿದ್ದರು:
ಬಿಪಾಶಾ ಮತ್ತು ಕರಣ್ ೨೦೧೫ ರಲ್ಲಿ ಬಿಡುಗಡೆಯಾದ ’ಅಲೋನ್’ ಫಿಲ್ಮ್ ನಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಅ ದಿನಗಳಲ್ಲಿ ಇಬ್ಬರ ಹೆಸರು ಸೇರಿಕೊಳ್ಳಲು ಆರಂಭಿಸಿತು. ಆರಂಭದಲ್ಲಿ ಫಿಲ್ಮ್ ನ ಪ್ರಚಾರಕ್ಕಾಗಿ, ಅವರ ಸಂಬಂಧದ ತಂತ್ರವನ್ನು ಮಾಡಲಾಗಿತ್ತು ಎಂದೇ ಜನ ನಂಬಿದ್ದರು.ಆದರೆ ಅದರ ನಂತರವೂ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ವಿಶೇಷವೆಂದರೆ ಬಿಪಾಶಾ ಕರಣ್ ಅವರ ಮೂರನೇ ಪತ್ನಿ. ಕರಣ್ ಕೊನೆಯದಾಗಿ ಕುಬೂಲ್ ಹೈ -೨ ಧಾರಾವಾಹಿಯಲ್ಲಿ ಸುರಭಿ ಜ್ಯೋತಿ ಎದುರು ಕಾಣಿಸಿಕೊಂಡರು. ಬಿಪಾಶಾ ಕ್ರೈಮ್-ಥ್ರಿಲ್ಲರ್ ಸರಣಿ ’ಡೇಂಜರಸ್’ ನಲ್ಲಿ ಕಾಣಿಸಿಕೊಂಡರು.

’ಡಂಕಿ’ ಫಿಲ್ಮ್ ಸೆಟ್‌ನಿಂದ ಶಾರುಖ್-ತಾಪ್ಸಿಯ ಹೊಸ ಲುಕ್ ಸೋರಿಕೆ

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರು ನಿರ್ದೇಶಿಸುತ್ತಿರುವ ’ಡಂಕಿ’ ಫಿಲ್ಮ್ ನ ಬಗ್ಗೆ ಅಭಿಮಾನಿಗಳಲ್ಲಿ ಹೈ ಬಝ್ ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಫಿಲ್ಮ್ ನ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಶೂಟಿಂಗ್ ಸಮಯದಲ್ಲಿ, ಫಿಲ್ಮ್ ನ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಆಗಿರುವ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.


ಕಳೆದ ಹಲವು ದಿನಗಳಿಂದ ಬಾಲಿವುಡ್‌ನ ಕಿಂಗ್ ಖಾನ್ ಅಂದರೆ ಶಾರುಖ್ ಖಾನ್ ಅಭಿನಯದ ’ಡಂಕಿ’ ಫಿಲ್ಮ್ ನ ಶೂಟಿಂಗ್ ವೇಳೆ ಹಲವು ಫೋಟೋಗಳು, ವಿಡಿಯೋಗಳು ಬಂದಿದ್ದು, ಇದೀಗ ಮತ್ತೊಮ್ಮೆ ಫಿಲ್ಮ್ ಸೆಟ್‌ನಿಂದ ಶಾರುಖ್ ಖಾನ್ ಮೊಣಕಾಲೂರಿ ನಿಂತಿರುವ ಫೋಟೋ ವೈರಲ್ ಆಗುತ್ತಿದೆ. ಅವರು ಅದರಲ್ಲಿ ಕುಳಿತಿರುವಂತೆ ತೋರುತ್ತಿದೆ. ಮತ್ತೊಂದೆಡೆ ತಾಪ್ಸಿ ಪನ್ನು ಅವರ ಪಕ್ಕದಲ್ಲಿ ನಿಂತಿದ್ದಾರೆ ಮತ್ತು ನಗುತ್ತಿದ್ದಾರೆ. ಇಬ್ಬರ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಈ ಹಿಂದೆ, ಶಾರುಖ್ ಖಾನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು, ಅದರಲ್ಲಿ ಅವರು ಕಪ್ಪು ಪ್ಯಾಂಟ್‌ನ ಶರ್ಟ್ ಮೇಲೆ ಕೆಂಪು ಬಣ್ಣದ ಜಾಕೆಟ್‌ನೊಂದಿಗೆ ಬಂದಿದ್ದರು. ಹಾಗಿದ್ದೂ ಈ ಕ್ಯಾಶುಯಲ್ ಲುಕ್ ಅವರ ಫಿಲ್ಮ್ ನ ಭಾಗವೇ ಅಥವಾ ಅಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ವೀಡಿಯೋ ನೋಡಿದ ನಂತರ ಅವರು ಸಾಹಸ ದೃಶ್ಯ ಮಾಡುವಾಗ ವಿದೇಶಕ್ಕೆ ಬಂದಿದ್ದಾರೆ ಎಂದು ಊಹಿಸಲಾಗಿದೆ.
’ಡಂಕಿ’ ಫಿಲ್ಮ್ ನಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿದ್ದಾರೆ. ಶಾರುಖ್ ಅಭಿನಯದ ’ಡಂಕಿ’ ಸಿನಿಮಾ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಫಿಲ್ಮ್ ನ ಜೊತೆಗೆ ‘ಜವಾನ್’ ಮತ್ತು ‘ಪಠಾಣ್’ ಫಿಲ್ಮ್ ಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳ ಸಂಖ್ಯೆ ಅಪಾರವಾಗಿದ್ದು, ಅವರ ಫಿಲ್ಮ್ ಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಬಹಳ ದಿನಗಳ ನಂತರ ಅವರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಇದೀಗ ಕಿಂಗ್ ಖಾನ್ ರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.