ಮದುವೆಯಾದ ಮೂರೇ ದಿನಕ್ಕೆ ಅಪಘಾತದಲ್ಲಿ ಯುವಕ ಸಾವು

ಬೀದರ್:ಜು.3: ಮದುವೆಯಾದ ಮೂರೇ ದಿನಕ್ಕೆ ಯುವಕನೊಬ್ಬ ಬೈಕ್ ಅಪಘಾತದಲ್ಲಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಬೀದರ್ ನಗರದಲ್ಲಿ ನಡೆದಿದೆ. ಕಮಲನಗರ ತಾಲೂಕಿನ ಬಳತ್ (ಬಿ) ಗ್ರಾಮದ ಅರುಣ ಕಾಶಿನಾಥ ಪಡಸಾಲೆ (33) ಮೃತಪಟ್ಟ ಯುವಕ. ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಅರುಣ ಕಾಶಿನಾಥ, ನೌಬಾದನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಕಳೆದ (ಜೂ29) 4 ದಿನದ ಹಿಂದೆ ಮದುವೆಯಾಗಿತ್ತು. ನಿನ್ನೆ ಅವರು ಹುಮನಾಬಾದ ತಾಲೂಕಿನ ಮುಗನೂರನ ಪತ್ನಿನಿವಾಸಕ್ಕೆ ತೆರಳಿ ರಾತ್ರಿ ನೌಬಾದಗೆ ಬೈಕ್‍ನಲ್ಲಿ ವಾಪಸ್ ಬರುವಾಗ ಸರ್ಕಾರಿ ಬಸಗೆ ಡಿಕ್ಕಿ ಹೊಡೆದಿದೆ, ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾದ ಹಿನ್ನಲೆ ಅರುಣ ಕಾಶಿನಾಥ ಸ್ಥಳದಲ್ಲೇ ಮೃಪಟ್ಟಿದ್ದಾರೆ.

ದುರಂತದಿಂದ ಎರಡು ಕುಟುಂಬಗಳಿಗೆ ಆಘಾತವನ್ನುಂಟು ಮಾಡಿದೆ. ಸ್ಥಳಕ್ಕೆ ನಗರ ಠಾಣೆ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.