ಮದುವೆಯಾಗದೆ ಮೂರನೇ ಬಾರಿಗೆ ತಂದೆಯಾಗಿರುವ ಅರ್ಜುನ್ ರಾಂಪಾಲ್ ೪೯ ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು ನವೆಂಬರ್ ೨೬ ರಂದು ತಮ್ಮ ೪೯ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರು ೧೯೭೨ ರಲ್ಲಿ ಜಬಲ್ಪುರದಲ್ಲಿ ಜನಿಸಿದವರು, ಆದರೆ ಅವರ ಬಾಲ್ಯವು ಏರಿಳಿತಗಳಿಂದ ತುಂಬಿತ್ತು. ಚಿಕ್ಕವರಿದ್ದಾಗ ಅವರ ಹೆತ್ತವರು ವಿಚ್ಛೇದನ ಪಡೆದಿದ್ದರು.
ಅರ್ಜುನ್ ಮಿಲಿಟರಿ ಕುಟುಂಬದ ಹಿನ್ನೆಲೆಯಿಂದ ಬಂದವರು, ಅವರ ತಂದೆ ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು. ಆದರೆ ಅವರ ಪೋಷಕರು ವಿಚ್ಛೇದನ ಪಡೆದಾಗ, ಅವರು ಮಿಲಿಟರಿ ಹಿನ್ನೆಲೆಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡರು. ನಂತರ ಅವರ ತಾಯಿ ಮಹಾರಾಷ್ಟ್ರದ ನಾಸಿಕ್‌ಗೆ ಸ್ಥಳಾಂತರ ಗೊಂಡಿದ್ದರು. ಅರ್ಜುನ್ ತನ್ನ ಶಾಲಾ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ್ದರು. ಅರ್ಜುನ್ ರಾಂಪಾಲ್ ತಮ್ಮ ಪದವಿಯನ್ನು ದೆಹಲಿಯ ಹಿಂದೂ ಕಾಲೇಜ್ ನಲ್ಲಿ ಪೂರ್ಣಗೊಳಿಸಿದರು. ಇದರೊಂದಿಗೆ ಮಾಡೆಲಿಂಗ್ ಕೂಡ ಆರಂಭಿಸಿದರು.ಅರ್ಜುನ್ ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದರು- “ನಾನು ಮಾಡೆಲಿಂಗ್ ಮತ್ತು ನಟನೆ ಮಾಡುತ್ತೇನೆ ಎಂದು ಕಾಲೇಜ್ ಓದುವ ಸಮಯದಲ್ಲಿ ಯೋಚಿಸಿರಲಿಲ್ಲ”.
ಅರ್ಜುನ್ ರಾಂಪಾಲ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಮಾಡೆಲಿಂಗ್ ಪ್ರಪಂಚದಿಂದ ಬಾಲಿವುಡ್‌ಗೆ ಅವರ ಪ್ರಯಾಣದ ಬಗ್ಗೆ ನೋಡೋಣ.
’ಪ್ಯಾರ್, ಇಶ್ಕ್ ಔರ್ ಮೊಹಬ್ಬತ್” ಫಿಲ್ಮ್ ನ ಮೂಲಕ ಅರ್ಜುನ್ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅಂದಿನಿಂದ ಅರ್ಜುನ್ ಹಿಂತಿರುಗಿ ನೋಡದ ನಟನೆಯ ಪಯಣ ಶುರುವಾಯಿತು.ಈ ನಟ ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ ೪೦ ಕ್ಕೂ ಹೆಚ್ಚು ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ. ಅವರು ದೀವಾನಪನ್, ದಿಲ್ ಹೈ ತುಮ್ಹಾರಾ, ಐ ಸೀ ಯು, ಇಂಪಾಸಿಬಲ್, ಶ್ಯೂರ್, ರಾಯ್, ದಿಲ್ ಕಾ ರಿಶ್ತಾ, ಚಕ್ರವ್ಯೂಹ್, ಇಂಕಾರ್, ಡ್ಯಾಡಿ, ಅಂಕ್ ಹಿ, ದಿಲ್ ಹೈ ತುಮ್ಹಾರಾ, ಡಾನ್, ವಾದಾ, ಓಂ ಶಾಂತಿ ಓಂ, ಹೌಸ್‌ಫುಲ್, ಪಾಲಿಟಿಕ್ಸ್ ….ಇತ್ಯಾದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ರಾ.ವನ್ ಇಂತಹ ಫಿಲ್ಮ್ ಗಳಲ್ಲಿಯೂ ತಮ್ಮ ನಟನೆಯ ಮೂಲಕ ಜನಮನವನ್ನು ಗೆದ್ದಿದ್ದಾರೆ.
ಅರ್ಜುನ್ ರಾಂಪಾಲ್ ಅವರು ತಮ್ಮ ಪತ್ನಿ ಮೆಹರ್ ಜೆಸಿಯಾ ಅವರಿಂದ ಬೇರ್ಪಟ್ಟಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಅರ್ಜುನ್ ತಮ್ಮ ಪತ್ನಿ ಮೆಹರ್ ಜೆಸಿಯಾ ಅವರಿಂದ ವಿಚ್ಛೇದನ ಪಡೆದಿದ್ದಾರೆ ಮತ್ತು ಅವರು ಗೆಳತಿ ಗೇಬ್ರಿಯೆಲಾ ಅವರೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ ವಾಸಿಸುತ್ತಿದ್ದಾರೆ. ವಿವಾಹ ಆಗದಿದ್ದರೂ , ಇವರಿಬ್ಬರಿಗೆ ಎರಡು ವರ್ಷದ ಓರ್ವ ಮಗನಿದ್ದಾನೆ.
೨೦೧೯ ರಿಂದ ಅವರು ಮೆಹರ್ ಜೊತೆ ಸುಮಾರು ೨೦ ವರ್ಷಗಳ ದಾಂಪತ್ಯ ಸಂಬಂಧವನ್ನು ಕೊನೆಗೊಳಿಸಿದರು. ಅರ್ಜುನ್ ರಾಂಪಾಲ್ ಮೆಹರ್ ಜೊತೆಗಿನ ದಾಂಪತ್ಯದಲ್ಲಿ ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅರ್ಜುನ್ ಮತ್ತು ಮೆಹರ್ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಬಂದಿತ್ತು.ಕೊನೆಗೆ ೨೮ ಮೇ ೨೦೧೮ ರಂದು, ಜಂಟಿ ಹೇಳಿಕೆಯನ್ನು ನೀಡುವ ಮೂಲಕ, ಅವರು ತಮ್ಮ ದಾಂಪತ್ಯವನ್ನು ಕೊನೆಗೊಳಿಸುವುದಾಗಿ ಘೋಷಿಸಿದರು.
ಅರ್ಜುನ್ ಮತ್ತು ಮೆಹರ್ ಜೆಸಿಯಾ ಜಂಟಿ ಹೇಳಿಕೆಯಲ್ಲಿ, “ನಾವು ೨೦ ವರ್ಷಗಳಿಂದ ಸುಂದರ ಮತ್ತು ಪ್ರೀತಿಯಿಂದ ಒಟ್ಟಿಗೆ ಇದ್ದೆವು. ಅನೇಕ ನೆನಪುಗಳಿವೆ .ಆದರೆ ಈಗ ನಾವು ವಿಭಿನ್ನ ಹಾದಿಯಲ್ಲಿ ಹೋಗುತ್ತಿದ್ದೇವೆ ಎಂದು ನಿಮಗೆ ಹೇಳಲು ಬಯಸುತ್ತೇವೆ. ಆದರೆ
ಭವಿಷ್ಯದಲ್ಲಿಯೂ ನಾವು ಒಟ್ಟಿಗೆ ಇರುತ್ತೇವೆ. ಒಬ್ಬರಿಗೊಬ್ಬರು ಗಟ್ಟಿಯಾಗಿ ನಿಲ್ಲುವವರು. ಈವಾಗ ನಾವಿಬ್ಬರೂ ತೀರಾ ಖಾಸಗಿ ವ್ಯಕ್ತಿಗಳು. ಪರಸ್ಪರ ಪ್ರತ್ಯೇಕತೆಯ ಸಂಗತಿಯನ್ನು ಸಾರ್ವಜನಿಕಗೊಳಿಸುವುದು ತುಂಬಾ ವಿಚಿತ್ರವಾಗಿದೆ .ಆದರೆ ಇಲ್ಲಿ ಅದು ಸತ್ಯವಾಗಿದೆ. ಅದರಿಂದ ಓಡಿಹೋಗಲು ಸಾಧ್ಯವಿಲ್ಲ. ನಾವು ಕುಟುಂಬ ಜೀವಿಗಳು.ನಮ್ಮಿಬ್ಬರ ಪ್ರೀತಿ ಮುಂದುವರಿಯುತ್ತದೆ. ನಾವು ಯಾವಾಗಲೂ ಪರಸ್ಪರ ಸಹಾಯ ಮಾಡುತ್ತೇವೆ. ನಮ್ಮ ಹೆಣ್ಣುಮಕ್ಕಳಾದ ಮಹಿಕಾ ಮತ್ತು ಮೈರಾ ನಮ್ಮ ಆದ್ಯತೆಯಾಗಿರುತ್ತಾರೆ. ದಯವಿಟ್ಟು ನಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮೆಲ್ಲರ ಸಹಕಾರಕ್ಕೆ ಧನ್ಯವಾದಗಳು’ ಎಂದಿದ್ದರು.
ಮೆಹರ್‌ರಿಂದ ಬೇರ್ಪಟ್ಟ ನಂತರ, ಅರ್ಜುನ್ ತನ್ನ ಹೆಂಡತಿ ಮತ್ತು ಮಗಳಂದಿರಿಗೆ ವಾಸಿಸಲು ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ನೀಡಿದರು. ಮತ್ತು ಅವರು ಸ್ವತಃ ಗೆಳತಿ ಗೇಬ್ರಿಯೆಲಾ ಅವರೊಂದಿಗೆ ೨ ಬಿಎಚ್ ಕೆ ಅಪಾರ್ಟ್ ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.ಇವರಿಗೆ ಎರಿಕ್ ಎಂಬ ಮಗ ಇದ್ದಾನೆ.
ಅರ್ಜುನ್ ರಾಂಪಾಲ್ ೧೯೯೮ ರಲ್ಲಿ ಮೆಹರ್ ಜೆಸಿಯಾ ಅವರನ್ನು ವಿವಾಹವಾಗಿದ್ದರು. ಅರ್ಜುನ್ ಮತ್ತು ಮೆಹರ್ ತುಂಬಾ ಸುಂದರವಾದ ಪ್ರೇಮಕಥೆಯನ್ನು ಹೊಂದಿದವರು. ಮೆಹರ್ ತನ್ನ ಪತಿ ಅರ್ಜುನ್ ಗಿಂತ ೨ ವರ್ಷ ದೊಡ್ಡವರಾಗಿದ್ದಾರೆ.
ಮೆಹರ್ ಮಾಡೆಲಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ಮತ್ತು ೧೯೮೬ ರಲ್ಲಿ ೧೬ ನೇ ವಯಸ್ಸಿನಲ್ಲಿ ಫೆಮಿನಾ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದರು. ಫೆಮಿನಾ ಮಿಸ್ ಇಂಡಿಯಾ ಆದ ನಂತರವೇ ಮೆಹರ್ ಮಾಡೆಲಿಂಗ್ ಆರಂಭಿಸಿದರು. ಶೀಘ್ರದಲ್ಲೇ ಅವರು ಯಶಸ್ವಿ ರೂಪದರ್ಶಿಯಾದರು. ಆ ಸಮಯದಲ್ಲಿ ಅರ್ಜುನ್ ರಾಂಪಾಲ್ ಕೂಡ ಮಾಡೆಲಿಂಗ್ ವೃತ್ತಿಯನ್ನು ಮಾಡುತ್ತಿದ್ದರು. ಮಾಡೆಲಿಂಗ್‌ನ ಈ ಆರಂಭಿಕ ದಿನಗಳಲ್ಲಿ ಅರ್ಜುನ್ ಮತ್ತು ಮೆಹರ್ ಪರಸ್ಪರ ಹತ್ತಿರವಾಗಿದ್ದರು ಮತ್ತು ದೀರ್ಘಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರೂ ೧೯೯೮ ರಲ್ಲಿ ಮದುವೆಯಾಗಲು ನಿರ್ಧರಿಸಿದ್ದರು.
ಗೆಳತಿ ಗೇಬ್ರಿಯೆಲ್ಲಾ ಅವರಿಂದ ಜನ್ಮದಿನಕ್ಕೆ ಶುಭಾಶಯ:
ಅರ್ಜುನ್ ರಾಂಪಾಲ್ ಹುಟ್ಟುಹಬ್ಬದಂದು ಗೆಳತಿ ಗೇಬ್ರಿಯೆಲ್ಲಾ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾರೆ.ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಿಂದಾಗಿ ಜನಮನದಲ್ಲಿ ಉಳಿದಿದ್ದಾರೆ. ಅವರ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡಿಸ್ ರಾಂಪಾಲ್ ಅವರಿಗಾಗಿ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ನವೆಂಬರ್ ೨೬ ನಟ ಅರ್ಜುನ್ ರಾಂಪಾಲ್ ಅವರ ಜನ್ಮದಿನ. ಅವರು ೪೯ ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ದೇಶ-ವಿದೇಶಗಳ ಅಭಿಮಾನಿಗಳು ಅವರನ್ನು ಅಭಿನಂದಿಸಿ ಶುಭ ಹಾರೈಸುತ್ತಿದ್ದಾರೆ. ಅದೇ ಸಮಯದಲ್ಲಿ, ಅವರಿಗೆ ಅತ್ಯಂತ ವಿಶೇಷವಾದ ಆಶಯವನ್ನು ಅವರ ಗೆಳತಿ ಮತ್ತು ಪಾಲುದಾರರಾದ ಗೇಬ್ರಿಯೆಲಾ ಡಿಮೆಟ್ರಿಡೆಡ್ಸ್ ಕೂಡಾ ವಿಶ್ ಮಾಡಿದ್ದಾರೆ. ಅವರು ತಮ್ಮ ಸಣ್ಣ ಕುಟುಂಬದೊಂದಿಗೆ ಸಂತೋಷದ ಜೀವನವನ್ನು ಆನಂದಿಸುತ್ತಿರುವ ನಟನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ತಮ್ಮ ಮಗನೊಂದಿಗೆ ಮೋಜು ಮಾಡುತ್ತಿದ್ದಾರೆ.
ಅರ್ಜುನ್ ಗೆ ತನ್ನವರಲ್ಲಿನ ಪ್ರೀತಿ ಮತ್ತು ಮಗನನ್ನು ಹೇಗೆ ಸಂತೋಷವಾಗಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಗೇಬ್ರಿಯೆಲಾ ವಿಡಿಯೋ ಮೂಲಕ ತೋರಿಸಿದ್ದಾರೆ. ಅದನ್ನು ಹಂಚಿಕೊಳ್ಳುವಾಗ ಗೇಬ್ರಿಯೆಲಾ ಬರೆದಿದ್ದಾರೆ- ”ನಮ್ಮ ಜೀವನವನ್ನು ಬೆಳಗಿಸಿದ್ದಕ್ಕಾಗಿ ಧನ್ಯವಾದಗಳು, ನಿಜವಾಗಿಯೂ ನಿಮ್ಮಂತಹವರು ಯಾರೂ ಇಲ್ಲ. ನೀವು ಪ್ರತಿದಿನ ನನ್ನನ್ನು ಆಶ್ಚರ್ಯಗೊಳಿಸುತ್ತೀರಿ, ನೀವು ಸಿಂಹವಾಗಿರಿ.”
ಇದಲ್ಲದೆ, ಗೇಬ್ರಿಯೆಲ್ಲಾ ಇನ್ಸ್ಟ್ರಾಗ್ರಾಮ್ ನ ಕಥಾ ವಿಭಾಗದಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ, ದಂಪತಿಗಳು ತಮ್ಮ ಗುಣಮಟ್ಟದ ಸಮಯವನ್ನು ಉದ್ಯಾನದಲ್ಲಿ ಒಟ್ಟಿಗೆ ಕಳೆಯುತ್ತಿದ್ದಾರೆ.ಇದನ್ನು ಹಂಚಿಕೊಳ್ಳುತ್ತಾ, ಅವರು ’ಹ್ಯಾಪಿ ಬರ್ತ್‌ಡೇ ಬೇಬಿ’ ಎಂದು ಬರೆದಿದ್ದಾರೆ.
ಮುಂದಿನ ಫೋಟೋದಲ್ಲಿ, ಅರ್ಜುನ್ ತನ್ನ ಮಗ ಎರಿಕ್ ಜೊತೆ ಮೋಜು ಮಾಡುತ್ತಿದ್ದಾರೆ. ಈ ಝಲಕ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕೂಡ ಅವರ ಪ್ರೀತಿಯನ್ನು ಮೆರೆದಿದ್ದಾರೆ. ಈ ಸಂದರ್ಭದಲ್ಲಿ ನಟನ ಹಿರಿಯ ಮಗಳು ಮಹಿಕಾ ರಾಂಪಾಲ್ ಕೂಡ ತಮ್ಮ ತಂದೆಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅರ್ಜುನ್ ರಾಂಪಾಲ್ ೧೯೯೮ ರಲ್ಲಿ ಮಾಡೆಲ್ ಮೆಹರ್ ಜೆಸಿಯಾ ಅವರನ್ನು ವಿವಾಹವಾಗಿದ್ದರು. ಅವರು ೨೦೧೮ ರಲ್ಲಿ ತಮ್ಮ ೨೦ ವರ್ಷಗಳ ದಾಂಪತ್ಯವನ್ನು ಮುರಿದರು. ಈ ದಾಂಪತ್ಯದಿಂದ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಸುಂದರ ಹೆಣ್ಣು ಮಕ್ಕಳಿದ್ದಾರೆ. ಗೆಳತಿಯ ಜೊತೆಗಿರುವ ರಾಂಪಾಲ್ ಅವರಿಗೆ ಎರಿಕ್ ಎಂಬ ಮಗನೂ ಇದ್ದಾನೆ. ಅರ್ಜುನ್ ತನ್ನ ಗೆಳತಿಯನ್ನು ಇನ್ನೂ ಮದುವೆಯಾಗಿಲ್ಲ. ಆದರೆ ಪಿಕ್ನಿಕ್ ಹೋದಾಗ ಮೊದಲ ಪತ್ನಿಯ ಇಬ್ಬರು ಹೆಣ್ಣುಮಕ್ಕಳೂ ಖುಷಿಯಿಂದ ಜೊತೆಯಲ್ಲಿ ಬರುತ್ತಾರೆ.

೨೬/೧೧ ದಾಳಿಯ ವಾರ್ಷಿಕೋತ್ಸವದಂದು ಬಾಲಿವುಡ್ ತಾರೆಯರು ಹುತಾತ್ಮರಿಗೆ ಗೌರವ ಸಲ್ಲಿಸಿದರು

೨೬ ನವೆಂಬರ್ ೨೦೦೮ ರಂದು ಮುಂಬೈನಲ್ಲಿ ಹೃದಯ ವಿದ್ರಾವಕ ಪಾಕ್ ಭಯೋತ್ಪಾದಕರ ದಾಳಿ ನಡೆದಿತ್ತು. ಈ ದಾಳಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದಿನದಂದು ದೇಶದಾದ್ಯಂತ ಹುತಾತ್ಮರಾದವರಿಗೆ ಮತ್ತು ಈ ಘಟನೆಯಲ್ಲಿನ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಬಾಲಿವುಡ್ ತಾರೆಯರೂ ಕೂಡ ತಮ್ಮ ದುಖ:ದ ಭಾವನೆಗಳನ್ನು ಈ ಸಮಯ ವ್ಯಕ್ತಪಡಿಸಿದ್ದಾರೆ.


ಹೌದು, ೧೩ ವರ್ಷಗಳ ಹಿಂದೆ ಮುಂಬೈನಲ್ಲಿ ನಡೆದ ಆ ಭೀಕರ ದಾಳಿಯನ್ನು ನೆನಪಿಸಿಕೊಂಡು ಬಾಲಿವುಡ್ ನ ಖಿಲಾಡಿ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ,
”ಭೀಕರ ಮುಂಬೈ ಉಗ್ರರ ದಾಳಿ ನಡೆದು ಇಂದಿಗೆ ೧೩ ವರ್ಷಗಳಾಗಿವೆ. ತಮ್ಮ ಪ್ರಾಣ ಕಳೆದುಕೊಂಡವರೆಲ್ಲರನ್ನು, ಆತ್ಮೀಯರನ್ನು ಸ್ಮರಿಸುತ್ತಿದ್ದೇವೆ. ನಮ್ಮ ನಗರವನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲಾ ವೀರರಿಗೆ ನನ್ನ ಹೃತ್ಪೂರ್ವಕ ನಮನಗಳು.”ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಹಿರಿಯ ನಟ ಅನುಪಮ್ ಖೇರ್ ಅವರು ಪ್ರತೀ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ನಿನ್ನೆವೀಡಿಯೋವನ್ನು ಹಂಚಿಕೊಳ್ಳುವಾಗ, ”ನಾ ಭೂಲೇಂಗೆ, ನಾ ಮಾಫ್ ಕರೇಂಗೆ ” ಎಂದಿದ್ದಾರೆ.
ಅತ್ತ ಈ ದಿನದಂದು ಎಲ್ಲರೂ ಒಂದು ಕ್ಷಣ ಮೌನ ಆಚರಿಸುವಂತೆ ನಟ ವಿವೇಕ್ ಒಬೆರಾಯ್ ವಿನಂತಿಸಿದ್ದರು.
ಅವರು ಮತ್ತಷ್ಟು ಬರೆಯುತ್ತಾ- ”ಈ ದಾಳಿಯಲ್ಲಿ ಜನರ ಪ್ರಾಣವನ್ನು ಉಳಿಸಲು ತಮ್ಮ ಪ್ರಾಣವನ್ನು ಬಲಿಕೊಟ್ಟವರಿಗಾಗಿ ಶ್ರದ್ಧಾಂಜಲಿ. ಅಂದು ನಾವು ನಮ್ಮ ಮನೆಯಲ್ಲಿ ಸುರಕ್ಷಿತವಾಗಿದ್ದಾಗ, ಆ ವೀರ ಸೈನಿಕರು ಗುಂಡುಗಳನ್ನು ಎದುರಿಸಿದರು. ನಾನು ಆ ಹುತಾತ್ಮರಿಗೆ ನಮಸ್ಕರಿಸುತ್ತೇನೆ”ಎಂದಿದ್ದಾರೆ.
ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಆ ಹುತಾತ್ಮರನ್ನು ಸ್ಮರಿಸುತ್ತಾ ತಾವೂ ನಮಸ್ಕರಿಸಿದ್ದಾರೆ. ಮತ್ತು ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.