ಮದುವೆಗೆ ಮುಂದಾದ ನಟಿ ನಿತ್ಯಾ

ಬೆಂಗಳೂರು, ಜು. ೨೦- ಕನ್ನಡದ ಮೈನಾ ಹಾಗೂ ಕೋಟಿಗೊಬ್ಬ ೨ ಚಿತ್ರದಲ್ಲಿ ನಟಿಸಿದ, ನಿತ್ಯಾ ಮೆನನ್ ಮಲೆಯಾಳಂನ ಜನಪ್ರಿಯ ನಟನ ಜತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
ಚಿತ್ರರಂಗದಲ್ಲಿ ಇದೀಗ ಸಾಲು ಸಾಲು ನಟ, ನಟಿಯರು ಈ ವರ್ಷದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ನಯನತಾರಾ-ವಿಘ್ನೇಶ್ ಶಿವನ್ ರಿಂದ ಹಿಡಿದು ಆಲಿಯಾ ಭಟ್-ರಣಬೀರ್ ಕಪೂರ್ ವರೆಗೆ, ಅನೇಕ ಸೆಲೆಬ್ರಿಟಿಗಳು ಈ ವರ್ಷ ಮದುವೆಯಾಗಿದ್ದಾರೆ.
ಇದೀಗ, ನಿತ್ಯಾ ಮೆನನ್ ಕೂಡ ಈ ವರ್ಷ ಸಪ್ತಪದಿ ತುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ವರದಿಗಳ ಪ್ರಕಾರ, ನಟಿ ಮಲಯಾಳಂನ ಜನಪ್ರಿಯ ನಟನೊಂದಿಗೆ ಸಂಬಂಧದಲ್ಲಿದ್ದಾರೆ ಮತ್ತು ಶೀಘ್ರದಲ್ಲೇ ಮದುವೆಯಾಗಲು ಸಜ್ಜಾಗಿದ್ದಾರೆ ಎಂದು ತಿಳಿದು ಬಂದಿದ್ದು, ಅಧಿಕೃತ ಪ್ರಕಟಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಆರಾಮ್ ತಿರುಕಲ್ಪನಾ ನಂತರ ಅವರು ಯಾವುದೇ ಚಿತ್ರಗಳಿಗೆ ಸಹಿ ಹಾಕದಿರುವುದು ಅವರ ಮದುವೆಯ ಬಗ್ಗೆ ವದಂತಿಗಳಿಗೆ ಮತ್ತೊಂದು ಕಾರಣವಾಗಿದೆ. ಇದು ನಿತ್ಯಾ ತನ್ನ ಮದುವೆಯನ್ನು ಯೋಜಿಸುತ್ತಿರಬಹುದು ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ.