ಮದುವೆಗೆ ಕಾರ್ಯಕ್ಕೆ ಕಠಿಣ ನಿಯಮ

ಧಾರವಾಡ,ಏ25:ಏಪ್ರೀಲ್, ಮೇ ತಿಂಗಳು ಮದುವೆಗಳ ಕಾಲ. ಅನೇಕರು ಹಲವು ದಿನ, ತಿಂಗಳು ಮೊದಲೇ ಮದುವೆಯ ದಿನಾಂಕ, ಕಲ್ಯಾಣ ಮಂಟಪ ಗುರುತಿಸಿ ಮದುವೆ ನಿಶ್ಚಯ ಮಾಡಿರುತ್ತಾರೆ. ಆದರೆ ಮತ್ತೆ ಏರಡನೇಯ ಅಲೆಯಾಗಿ ಬಂದ ಕೋವಿಡ್-19 ಇದಕ್ಕೆಲ್ಲಾ ಸಮಸ್ಯೆಯಾಗಿ ನಿಂತಿದೆ. ಸರಕಾರವು ಏಪ್ರೀಲ್ 21 ರಿಂದ ಮೇ 4ರವರೆಗೆ ರಾಜ್ಯದಾದ್ಯಂತ ಕಪ್ರ್ಯೂ, ಸೆಮಿಲಾಕಡೌನ್ ಘೋಷಿಸಿದ್ದು, ಮದುವೆ ಕಾರ್ಯ ಮಾಡಲು ಅನೇಕ ಕಠಿಣ ನಿಯಮಗಳನ್ನು ವಿಧಿಸಿದೆ.
ಆದರೆ ಜನಪರ ಆಡಳಿತ ನೀಡುತ್ತಿರುವ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸರಕಾರ ಘೋಷಿಸಿರುವ ಕಪ್ರ್ಯೂ, ಕೋವಿಡ್-19ರ ಸುರಕ್ಷತಾ ಮಾರ್ಗಸೂಚಿಗಳ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಈ ನಿಯಮಗಳ ಕಠಿಣ ಜಾರಿಯ ಮಧ್ಯೆಯೂ ಜಿಲ್ಲೆಯ ಜನರ ಮನವಿಗೆ ಸ್ಪಂದಿಸುವ ಮೂಲಕ ಸರಕಾರದ ನಿಯಮಗಳ ಪಾಲನೆಗೆ ಸಾರ್ವಜನಿಕರ ಸಹಕಾರ ಗಳಿಸುತ್ತಿದ್ದಾರೆ.
ಏಪ್ರೀಲ್ 21 ರಿಂದ ಮೇ 4ರವರೆಗೆ ಜರುಗುವ ಮದುವೆಗಳಲ್ಲಿ ಕೇವಲ 50 ಜನ ಮಾತ್ರ ಭಾಗವಹಿಸಲು ಸರಕಾರ ನಿಯಮ ಮಾಡಿದೆ. ಇದನ್ನು ಜಾರಿಗೊಳಿಸಲು ಮದುವೆ ಆಯೋಜಕರಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಕಷ್ಟಕರವಾಗಿದೆ. ಗ್ರಾಮೀಣ ಭಾಗ, ಅವಿಭಕ್ತ ಕುಟುಂಬದ ಮದುವೆಗಳಲ್ಲಿ ಈ ನಿಯಮ ಪಾಲನೆ ಸವಾಲಿನ ಕೆಲಸವಾಗಿದೆ.
ಇದಕ್ಕೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ವಿನೂತನ ಕ್ರಮ ಘೋಷಿಸಿ, ಮದುವೆಯಲ್ಲಿ ಪಾಲ್ಗೊಳ್ಳುವ 50 ಜನರು ಕಡ್ಡಾಯವಾಗಿ ತಮ್ಮ ಕೈಗೆ ಬ್ಯಾಂಡ್ ಧರಿಸಬೇಕೆಂದು ಮತ್ತು ಮದುವೆಗೆ ಅನುಮತಿ ಪಡೆಯವ ಆಯೋಜಕರಿಗೆ ವಿಶೇಷವಾದ 50 ಬ್ಯಾಂಡ್‍ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ. ಬ್ಯಾಂಡ್ ಧರಿಸದವರಿಗೆ ದಂಡ ವಿಧಿಸಲು ಮತ್ತು ಬ್ಯಾಂಡ್ ಬಳಕೆ ಜನರ ಮಿತಿಯ ಸಂಕೇತವಾಗಿ, ನಿಗಾವಹಿಸುವ ಕಾರ್ಯವನ್ನು ಸರಳಗೊಳಿಸಿದೆ.
ಮದುವೆ ನಿಶ್ಚಯ ಮಾಡಿರುವ ಅನೇಕರು ಮದುವೆಗೆ ಸ್ವಲ್ಪ ದಿನ ಮುಂಚಿತವಾಗಿ ಮಾಂಗಲ್ಯ ಸರ ಖರೀದಿಸಲು ನಿರ್ಧರಿಸಿ ಸುಮ್ಮನಿದ್ದರು. ಆದರೆ ಅನಿರೀಕ್ಷಿತವಾಗಿ ಬಂದ ಸೆಮಿಲಾಕಡೌನ್ ಅವರಿಗೆ ತೊಂದರೆಗೆ ಇಡು ಮಾಡಿದೆ. ಅನೇಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿ, ಆರ್ಡರ್ ಕೊಟ್ಟಿರುವ, ಬುಕ್ಕ ಮಾಡಿರುವ ಮಾಂಗಲ್ಯ ಸರ ಪಡೆಯಲು ಹಾಗೂ ಮೊದಲೇ ನಿರ್ಧರಿಸಿರುವ ಚಿನ್ನದ ಅಂಗಡಿಯಲ್ಲಿ ಮಾಂಗಲ್ಯ ಸರ ಖರೀದಿ ಮಾಡಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದ್ದಾರೆ.
ಇದಕ್ಕೂ ಸ್ಪಂಧಿಸಿರುವ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತ ಲಾಬೂರಾಮ್ ಅವರೊಂದಿಗೆ ಚರ್ಚಿಸಿ, ಕೆಲವು ಷರತ್ತುಗಳೊಂದಿಗೆ ಮಾಂಗಲ್ಯ ಸರ ಖರೀದಿಗೆ ಅನುಮತಿ ನೀಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಷರತ್ತುಗಳನ್ನು ರೂಪಿಸಿ, ಆಯೋಜಕರು ಪಾಲಿಸಲು ಸೂಚಿಸಿದ್ದಾರೆ.
ಮೇ 4ರ ವರೆಗೆ ಜರಗುವ ಮದುವೆಗಳಿಗಾಗಿ ಜಿಲ್ಲಾಡಳಿತದಿಂದ ಅನುಮತಿ ಪಡೆಯುವದನ್ನು ಕಡ್ಡಾಯಗೊಳ್ಳಿಸಲಾಗಿದ್ದು, ಜಿಲ್ಲಾಡಳಿತದ ಪರವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ವಲಯ ಸಹಾಯಕ ಆಯುಕ್ತರು ಹಾಗೂ ಉಳಿದ ಕಡೆಗೆ ತಹಸಿಲ್ದಾರರು ಅನುಮತಿ ಪತ್ರ ನೀಡುತ್ತಾರೆ.
ಆಯೋಜಕರು ಮದುವೆಗೆ ಅನುಮತಿ ಪಡೆಯಲು ಬಂದಾಗ, ಅಗತ್ಯವಿದ್ದರೆ ಮಾಂಗಲ್ಯ ಸರ ಖರೀದಿಗೆ ಅನುಮತಿ ಕೆಳಿ ಮನವಿ ಸಲ್ಲಿಸಬಹುದು. ಮನವಿಯಲ್ಲಿ ಜ್ಯೂವೆಲ್ಲೆರಿ ಶಾಫ್, ಸ್ಥಳ, ಖರೀದಿಗೆ ನಿಗದಿತ ಸಮಯ ತಿಳಿಸಬೇಕು. ತಹಶೀಲ್ದಾರ ಅಥವಾ ವಲಯ ಸಹಾಯಕ ಆಯುಕ್ತರು ಮನವಿ ಪರಿಗಣಿಸಿ ಸಮಯ ಮತ್ತು ಸಿಬ್ಬಂದಿ ಲಭ್ಯತೆಗೆ ಅನುಗುಣವಾಗಿ ಅನುಮತಿ ನೀಡುತ್ತಾರೆ. ಮಾಂಗಲ್ಯ ಸರ ಖರೀದಿ ಮಾಡುವ ಜ್ಯೂವೆಲ್ಲೆರಿ ಶಾಫ್ ಪ್ಯಾಪ್ತಿಯ ಕಂದಾಯ ಅಥವಾ ಪಾಲಿಕೆ ಒರ್ವ ಅಧಿಕಾರಿ, ಒರ್ವ ಪೊಲೀಸ್ ಸಿಬ್ಬಂದಿ ಇರುವ ತಂಡದೊಂದಿಗೆ ಹೋಗಿ ಮದುವೆ ಮನೆಯ ಒಬ್ಬರು ಮಾತ್ರ ಮಾಂಗಲ್ಯ ಸರ ಖರೀದಿಸಬಹುದು. ಖರೀದಿ ಸಂದರ್ಭದಲ್ಲಿ ಪರಸ್ಪರ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧಾರಣೆ ಕಡ್ಡಾಯವಾಗಿದ್ದು, ಸ್ಥಳದಲ್ಲಿ ಜ್ಯೂವೆಲ್ಲೆರಿ ಶಾಫ್‍ದವರು ಸ್ಯಾನಿಟೈಜರ್ ಇಟ್ಟಿರಬೇಕು.
ಸಾರ್ವಜನಿಕ ಮನವಿಗಳಿಗೆ ಜಿಲ್ಲಾಡಳಿತ ನಿರಂತರವಾಗಿ ಸ್ಪಂದಿಸುತ್ತಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಕೋವಿಡ್-19ರ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರತಿಯೋಬ್ಬರು ತಪ್ಪದೆ ಪಾಲಿಸುವ ಮೂಲಕ ಮಾಸ್ಕ್ ಧರಿಸಿ-ಪರಸ್ಪರ ಸಾಮಾಜಿಕ ಅಂತರ ಕಾಪಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.