ಮದರ್ ತೆರೆಸಾರ ಮಾನವೀಯತೆ ಮರೆಯಲಾಗದು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಅ.27: ಮಿಷನರೀಸ್ ಆಫ್ ಚಾರಿಟಿಯನ್ನು ಕಲ್ಕತ್ತಾ ನಗರದಲ್ಲಿ ಸ್ಥಾಪನೆ ಮಾಡಿ ಬಡವ,ದುರ್ಬಲ,ನಿರ್ಗತಿಕ, ವೃದ್ಧ, ಅಂಧ,ಅನಾಥ, ಕೃಷ್ಠರೋಗ,ಮರಣ ಸಂಕಟದಲ್ಲಿ ಇರುವವರ ಸೇವೆ ಮಾಡಿ ಆ ಮೂಲಕ ಶಾಂತಿಗಾಗಿ ನೋಬೆಲ್-1979 ಹಾಗೂ ಸಮಾಜ ಸೇವೆಗಾಗಿ ಭಾರತ ರತ್ನ ಪ್ರಶಸ್ತಿ 1980ರಲ್ಲಿ ಪಡೆದವರು ಮದರ್ ತೆರೆಸಾ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ  ಚೇಳ್ಳಗುರ್ಕಿಯ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಇಂದ ಹಮ್ಮಿಕೊಂಡಿದ್ದ ಮದರ್ ತೆರೆಸಾ ಅವರ 124ನೇ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ತೆರೆಸಾ ಅವರು ಆಲ್ಬೇನಿಯಾದ ಸ್ಕಾಪ್ಜೆಯಿಂದ 1947ರಲ್ಲಿ ಭಾರತ ದೇಶದ ಕಲ್ಕತ್ತಾ ನಗರಕ್ಕೆ ಬಂದು, ಇಲ್ಲಿನ ಪೌರತ್ವ ಪಡೆದು,ತಮ್ಮ ಜೀವಿತಾವಧಿಯಲ್ಲಿ ಐವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಸಮಾಜ ಸೇವೆಗಾಗಿ ಮುಡುಪಾಗಿಟ್ಟು ಆದರ್ಶ ಪ್ರಾಯರಾದವರು.
ಆದ್ದರಿಂದ ವಿದ್ಯಾರ್ಥಿಗಳು ತೆರೆಸಾ ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಹೇಳಿದರು.
ಕೆನರಾ ಬ್ಯಾಂಕ್ ನಿವೃತ್ತ ಸೀನಿಯರ್ ಮೆನೇಜರ್ ಹೊನ್ನೂರಪ್ಪ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ನಾನು ಕೂಡ ಅರವತ್ತು ಎಪ್ಪತ್ತರ ದಶಕದಲ್ಲಿ ಹಾಸ್ಟೆಲ್ ವಿದ್ಯಾರ್ಥಿ.1973ರಲ್ಲಿ ಶ್ರೀ ಎರ್ರಿತಾತ ಪ್ರೌಢಶಾಲೆಯಲ್ಲಿ ಎಸ್. ಎಸ್. ಎಲ್.ಸಿ ಯಲ್ಲಿ ಮೂವತ್ತು ವಿದ್ಯಾರ್ಥಿಗಳದ್ದರೆ ಇಡೀ ಊರಿಗೆ ಪಾಸಾದವರಲ್ಲಿ ನಾನೊಬ್ಬ ಮಾತ್ರ ಮತ್ತು ಕೆ.ವೀರಾಪುರದ ಇಬ್ಬರು.
ಆದ್ದರಿಂದ ಈ ಹಾಸ್ಟೆಲ್ ನಲ್ಲಿ ಇದುವರೆಗೆ ಶೇಕಡಾ ತೊಂಬತ್ತೊಂದು ಪಡೆದಿದ್ದಾರೆ. ಈ ವರ್ಷ ಅದಕ್ಕೂ ಮೀರಿ ಅಂಕ ಪಡೆಯಬೇಕು ಎಂದು ಹೇಳಿದರು.
ಊರಿನ ಸಿ.ಎರ್ರಿಸ್ವಾಮಿ,ನಿಲಯದ ನೌಕರರಾದ ಸುದರ್ಶನ್, ಲಕ್ಷ್ಮೀ, ರಮಾದೇವಿ, ಎಲ್ಲಕ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.