ಮದರ್ ಟ್ಯಾಂಕ್ ಸ್ವಚ್ಚತೆಗೆ ಕಾರ್ಪೊರೇಟರ್ ಮಿಂಚು ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.10: ನಗರಕ್ಕೆ ನೀರು ಸರಬರಾಜು ಮಾಡುವ ಭತ್ರಿ ಪ್ರದೇಶದ ಮದರ್ ಟ್ಯಾಂಕ್ ನ್ನು ಸ್ವಚ್ಚಗೊಳಿಸಲು ಮತ್ತು ಇದರ ಸುತ್ತಮುತ್ತ ಸಂಜೆವೇಳೆ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಸ್ಥಳೀಯ ಕಾರ್ಪೊರೇಟರ್ ವಿ.ಶ್ರೀನಿವಾಸುಲು ಮಿಂಚು ಪ್ರಯತ್ನಿಸಿದ್ದಾರೆ.
ಈ ಮೊದಲು ಟ್ಯಾಂಕ್ ನಲ್ಲಿ ಬೀಚಿಂಗ್ ಪೌಡರ್ ಹಾಕಿ ನೀರು ಮಲಿನಗೊಳ್ಳದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಕಳೆದ 8 ತಿಂಗಳಿಂದ ಬ್ಲೀಚಿಂಗ್ ಪೌಡರ್ ಹಾಕದ ಕಾರಣ ನೀರು ಮಲಿನಗೊಳ್ಳುತ್ತಿರುವ ಬಗ್ಗೆ. ನಗರದ ಶಾಸಕರು, ಮೇಯರ್,  ಗಮನಕ್ಕೆ. ಮತ್ತು ಸುತ್ತಮುತ್ತಲು ನಡೆಯುವ ಅನೈತಿಕ ಚಟುವಟಿಕೆಗಳ ನಿಯಂತ್ರಣಕ್ಕೆ ಎಸ್ಪಿ ಅವರ ಗಮನಕ್ಕೆ ತಂದಿದ್ದಾರೆ.
ನಿನ್ನೆ ಸಂಜೆ ಪಾಲಿಕೆ ಆಯುಕ್ತ ರುದ್ರೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ.  ಮದರ್ ಟ್ಯಾಂಕ್ ಸ್ವಚ್ಚತೆಗೆ ತಕ್ಷಣ  ಕ್ರಮ‌ ಕೈಗೊಳ್ಳಯವುದಾಗಿ ಹೇಳಿದ್ದಾರೆಂದು ಕಾರ್ಪೊರೇಟರ್ ಮಿಂಚು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

One attachment • Scanned by Gmail