ಮದನ್ ಪಟೇಲ್‌ಗೆ ಎಂಎಲ್‌ಸಿ ಸ್ಥಾನ ನೀಡುವಂತೆ ಆಗ್ರಹ

ರಾಮನಗರ, ಜೂ.೧೨- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮದನ್ ಪಟೇಲ್ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಎಂ.ನಾಗರಾಜು ಮನವಿ ಮಾಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ೧೯೯೦ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪಟೇಲ್ ಅವರು ಬೆಂಗಳೂರು. ಉತ್ತರ ಜಿಲ್ಲೆಗಳಲ್ಲಿ ಉಸ್ತುವಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಪ್ರತಿಯೊಂದು ಚುನಾವಣಿಗಳಲ್ಲಿ ಪ್ರಚಾರ ಕಾರ್ಯಗಳಲ್ಲಿ, ತೊಡಗಿಸಿಕೊಂಡು ಪಕ್ಷದ ಗೆಲುವಿಗೆ ಶ್ರಮಿಸಿರುತ್ತಾರೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಗೀತೆಗಳು ಮತ್ತು ವಿಡಿಯೋಗಳನ್ನು ನಿರ್ಮಿಸಿ ನಿರ್ದೇಶಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಅವಿರತ ಸೇವೆ ಸಲ್ಲಿಸಿರುತ್ತಾರೆ.
ಕರ್ನಾಟಕ ರಾಜ್ಯ ಮಾಧ್ಯಮ ಸಂಚಾಲಕನಾಗಿ ರಾಜ್ಯದಾದ್ಯಂತ ಮಾಧ್ಯಮ ಸೆಲ್ ಗಳನ್ನು ರಚಿಸುವ ಮೂಲಕ ಕಾಂಗ್ರೆಸ್ ಪಕ್ಷದ ಸೇವೆಸಲ್ಲಿಸಿರುತ್ತಾರೆ. ಎಂ.ಎಲ್.ಎ. ಚುನಾವಣೆಗೆ ಸ್ಪರ್ಧಿಸಲು ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ತಯಾರಿ ನಡೆಸಿ ದ್ದಾಗ ಸವರಿ ಕ್ಷೇತ್ರವನ್ನು ತಮಿಳು ಭಾಷಿಕರಿಗೆ ನಿಗದಿ ಪಡಿಸಿದ ಕಾರಣದಿಂದ ಹಾಗೂ ಈ ಹಿಂದೆ ಎರಡು ಬಾರಿ ಸಿನಿಮಾ ಕ್ಷೇತ್ರಕ್ಕಾಗಿ ಮೀಸಲಿಟ್ಟಿದ್ದ ಎಂ.ಎಲ್.ಸಿ. ನಾಮಕರಣದಿಂದ ಅವಕಾಶ ವಂಚಿತರಾಗಿರುತ್ತಾರೆ. ಕರ್ನಾಟಕ ಸರ್ಕಾರ ಯಾವುದೇ ಬೋರ್ಡ್ ಅಥವಾ ಕಾರ್ಮೋರೇಷನ್‌ನಲ್ಲಿ ಅಧ್ಯಕ್ಷರಾಗಿಯೂ ಅವಕಾಶ ನೀಡಿರುವುದಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಪ್ರಾರಂಭದಿಂದಲೂ ಮತ್ತು ಈ ಬಾರಿ ಗೆಲುವಿಗೆ ಹೆಚ್ಚಿನ ಬೆಂಬಲ ನೀಡಿರುವ ದಲಿತ ಸಮುದಾಯ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇಲ್ಲಿ ದಲಿತ ಸಮುದಾಯದ ಎಂ.ಎಲ್.ಸಿ ಪ್ರತಿನಿಧಿಗಳಿಲ್ಲದಿರುವ ಕಾರಣ ದಲಿತ ಸಮುದಾಯದ ಹಿರಿಯ ಸಿನಿಮಾ ಕಲಾವಿದರಾದ ಮದನ್ ಪಟೇಲ್‌ರವರನ್ನು ಸಿನಿಮಾ ಕ್ಷೇತ್ರಕ್ಕೆ ಮೀಸಲಾಗಿರುವ ಎಂ.ಎಲ್.ಸಿಯಾಗಿ ನಾಮಕರಣ ಮಾಡುವುದರಿಂದ ಮುಂಬರುವ ಲೋಕಸಭೆ, ಬಿಬಿಎಂಪಿ ಮುಂತಾದ : ಚುನಾವಣೆಗಳಲ್ಲಿ ಹೆಚ್ಚಿನ ಗೆಲುವಿಗೆ ಸಹಕಾರಿಯಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್ ಟಿ ನಗರ ಘಟಕದ ಅಧ್ಯಕ್ಷ ಶಿವಶಂಕರ್, ಕಾಂಗ್ರೆಸ್ ಮುಖಂಡರಾದ ಆರ್ಕೆರೆ ರಮೇಶ್, ದಾಸು, ಜಿಯಾ, ಶ್ರೀನಿವಾಸ್, ರಾಜು, ಇನ್ನಿತರರು ಇದ್ದರು.