ಮದನೂರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ

ಕಮಲನಗರ:ಮೇ.21: ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹಾಗೂ ಉಳಿದವರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ಮದನೂರ ಪಂಚಾಯತ್ ವ್ಯಾಪ್ತಿಯ ಮದನೂರ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಆಚರಿಸಲಾಯಿತು.

ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಬಳಿಕ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ನಾಗೇಶ್ ಬಳತೆ ಔರಾದ್ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲನಗರ ಜಿಲ್ಲಾ ಪಂಚಾಯತ್ವೇ ಕಾಂಗ್ರೆಸ್ ಗೆ ಅತ್ಯಂತ ಹೆಚ್ಚು ಲೀಡ್ ತಂದ ಕ್ಷೇತ್ರದ ವಾಗಿದೆ. ಕಳೆದ ಹಲವಾರು ವರ್ಷಗಳಿಂದ ಮದನೂರ ಗ್ರಾಮವು ಬಿಜೆಪಿ ಭದ್ರಕೋಟೆಯಾಗಿ ಉಳಿದಿತ್ತು ಆದರೆ ಈ ಸಲ ಮದನೂರ ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮದಿಂದ ಭದ್ರಕೋಟೆ ಛೇದಿಸಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಬಳತೆ, ಪ್ರಶಾಂತ್ ಸಾಮನಗಾವೆ, ಪ್ರಮೋದ್ ಬೀರಾದರ್, ನಾಗೇಶ್ ಬೀರಾದರ್, ಸಚಿನ್ ಬೀರಾದರ್, ಪಂಚಾಯತ್ ಅಧ್ಯಕ್ಷ ಶ್ರೀ ಹರಬಾಜಿ ಶಿಂಧೆ, ಕಾಂಗ್ರೆಸ್ ಮುಖಂಡ ವೈಜಿನಾಥ ದಾಬಕೆ, ವಿಶ್ವನಾಥ್ ರೊಟ್ಟೆ, ಸೋಪಾನ್ ಪೀಚರಟೆ ಗೋರಖನಾಥ ಸಾವಳೆ, ಪ್ರಶಾಂತ್ ಕಬಾಡೆ, ಪರಮೇಶ್ ಮಂಗಳೂರೆ, ಯುವರಾಜ್ ಕೋರಾಳೆ, ಸುರೇಶ್ ಕೋರಾಳೆ, ದತ್ತು ಪರಿಟ, ಈಶ್ವರ್ ಪಾಟೀಲ, ಯುವ ಕಾಂಗ್ರೆಸ್ ಮುಖಂಡ ನಾಗೇಶ್ ಬಳತೆ, ಪಟ್ಟನಾಯಕ ಮಹಿಪತಿ, ದೇವಾನಂದ್ ಪೀಚರಟೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.