ಮದಗುಣಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿನೂತನ ಕಾರ್ಯಕ್ರಮ

ಆಳಂದ: ಫೆ.24:ಮದಗುಣಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ತರಕಾರಿ ಮೇಳ ಹಾಗೂ ಫಿಟ್ ಇಂಡಿಯಾ ಯೋಜನೆಯ ಸಮಾರೋಪ ಸಮಾರಂಭ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ವಿನೂತನವಾಗಿ ಆಚರಿಸಲಾಯಿತು.

ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ವಿವಿಧ ಬಗೆಯ ತರಕಾರಿ ಹಣ್ಣು ಹಂಪಲಗಳನ್ನು ಮನೆಯಿಂದಲೇ ತಂದು ಪ್ರದರ್ಶನ ನಡೆಸಿ ಗಮನ ಸೆಳೆದರು. ಅಲ್ಲದೆ ವಿವಿಧ ತೆರೆನಾದ ತರಕಾರಿಗಳನ್ನು ಪ್ರದರ್ಶನದ ಜೊತೆಗೆ ಆರೋಗ್ಯಕ್ಕೆ ತರಕಾರಿ ಮಹತ್ವದ ಕುರಿತು ಪ್ರತ್ಯೇಕ ವಿವರಣೆಗಳು ನೀಡಿ ಗಮನ ಸೆಳೆದರು.

ಕಾರ್ಯಕ್ರಮದ ಅಂಗವಾಗಿ ಶಾಲೆಗೆ ತಳಿರು ತೋರಣ, ಬಾಳೆ, ಕಬ್ಬು ಹಣ್ಣು ತರಕಾರಿಗಳಿಂದ ಸಿಂಗರಿಸಿ ಕಂಗೊಳಿಸುವಂತೆ ಮಾಡಿದ್ದರು.

ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ್ ಸಣ್ಣಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಕ್ಷಣ ಜೊತೆಗೆ ಮುಂದಿನ ಬದುಕಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಗಳನ್ನು ಶಾಲೆಯಲ್ಲಿ ಕೈಗೊಳ್ಳುವ ಮೂಲಕ ಶಿಕ್ಷಕರು ಮಾದರಿ ಕಾರ್ಯವನ್ನು ಮಾಡಿದ್ದಾರೆ. ಶಿಕ್ಷಣದ ಜೊತೆಗೆ ಬದುಕಿಗೆ ಕೌಶಲ್ಯವಿತ ಜೀವನ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಳಕಿ ಬಿ. ಗ್ರಾಮದ ಶಿಕ್ಷಕ ಸಂತೋಷ್, ಗ್ರಾಮ ಪಂಚಾಯತಿ ಸದಸ್ಯರಾದ ಶಿವಶಾಂತ್ ಕುಲಕರ್ಣಿ, ಅಪ್ಪಾಸಾಬ ಮಾಳಗೆ, ರಾಚಣ್ಣ ಮಡಿವಾಳ್, ಶಾಲೆಯ ಎಸ್‍ಡಿಎಮ್‍ಸಿ ಸದಸ್ಯರಾದ ಸಂತೋಷ್ ಪಾಟೀಲ್ ಮತ್ತಿತರ ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಯಶವಂತ್ ಬಸ್ತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಶಿಕ್ಷಕ ಬಾಪುಗೌಡ ಬಿರಾದಾರ, ಕಿರಣ್ ಬಿಂಗೆ, ಅರವಿಂದ್, ಮಂಜುಳಾ, ಸಂಗಮ್ಮ, ಸ್ವಾತಿ ಉಪಸ್ಥಿತರಿದ್ದರು. ಕುಮಾರಿ ಸ್ಫೂರ್ತಿ ಪರಂಶೆಟ್ಟಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿರೂಪಾಕ್ಷಯ್ಯ ಹಿರೇಮಠ ಅವರು ವಂದಿಸಿದರು.