ಮದಗುಣಕಿ ಗ್ರಾಮದ ವಿವಿಧ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ

ಆಳಂದ:ನ.6:ತಾಲೂಕಿನ ಮದಗುಣಕಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ನೀಡುವುದಾಗಿ ತಾ.ಪಂ ಕಾರ್ಯನಿರ್ವಾಹ ಅಧಿಕಾರಿ ನಾಗಮೂರ್ತಿ ಶೀಲವಂತ ಅವರು ಹೇಳಿದ್ದಾರೆ.

ಮದಗುಣಿ ಗ್ರಾಮಕ್ಕೆ ಭೇಟಿ ನೀಡಿದಾಗ ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ಸಣ್ಣಮನಿ ಅವರು ಗ್ರಾಮದಲ್ಲಿ 8 ಕೊಳವೆ ಭಾವಿಗಳು ಇವೆ 3 ಕೊಳವೆ ಭಾವಿಗಳಿಗೆ ಪಂಪ್ ಸೆಟ್ ಇಲ್ಲ, ಇದ್ದ 5 ಕೊಳವೆ ಭಾವಿಗಳಿಗೆ ಪಂಪ್ ಸೆಟ್ ಇದ್ದರೂ ಸರಿಯಾದ ಸಮಯಕ್ಕೆ ನೀರು ಬೀಡುವುದಿಲ್ಲ, ಗ್ರಾಮದ ಒಳ ರಸ್ತೆ ಪಕ್ಕದಲ್ಲಿ ಮುಳ್ಳು ಕಂಟಿ ಹುಲ್ಲು ಬೆಳೆದು ಸಾರ್ವಜನಿಕರು ತೀರುಗಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಾಲಯದ ತಡೆಗೋಡೆ ಕುಸಿದಿರುವುದರಿಂದ ಮಹಿಳೆಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಇಓ ಅವರ ಗಮನಕ್ಕೆ ತಂದಾಗ ಸ್ಥಳದಲ್ಲಿ ಇದ್ದ ಪಿಡಿಓ ವಿನೋದ ಸೂಚಿಸಿ ಎಲ್ಲಾ ಕೊಳವೆ ಭಾವಿಗಳಿಗೆ ಪಂಪ್ ಸೆಟ್ ಕೂಡಿಸಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಬೇಕು ಮತ್ತು ಇನ್ನೂ ಗ್ರಾಮದ ಸಮಸ್ಯೆಗಳು 2-3 ದಿನದಲ್ಲಿ ಮಾಡಬೇಕು. ಮಾಡದೇ ಹೋದರೆ ನಿಮ್ಮ ವಿರುದ್ದ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಾಕೀತು ಮಾಡಿದರು. ಗ್ರಾಮದ ಮುಖಂಡರಾದ ಸಿದ್ಧಲಿಂಗ ಸಣ್ಣಮನಿ, ಶ್ರೀಮಂತ ಜಮಾದಾರ, ಹಣಮಂತ ಸಣ್ಣಮನಿ ಸೇರಿದಂತೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.