ಮತ‌ ನೀಡಲು ಮರೆಯಬೇಡಿಆಪ್ ಅಭ್ಯರ್ಥಿ ಕೇಶವರೆಡ್ಡಿ  ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,8 -ಯಾರು ಏನೇ ಅಮಿಷ ತೋರಿಸಲಿ ಆಮ್ ಆದ್ಮಿ ಪಕ್ಷದ  ಗುರ್ತು ಪೊರಕೆಗೆ ಮತ ನೀಡಿ ಎಂದು ಕೊರ್ಲಗುಂದಿ ದೊಡ್ಡ ಕೇಶವರೆಡ್ಡಿ ಮತದಾರರಲ್ಲಿ‌ ಮನವಿ ಮಾಡಿದ್ದಾರೆ.
ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ನಗರದ ಎಪಿಎಂಸಿ, ಬಾಪೂಜಿ ನಗರದಲ್ಲಿ ಮನೆ ಮನೆಗೆ ಸಂಚರಿಸಿ ಕರ ಪತ್ರ ಹಂಚಿ ಮತನೀಡಿ ಎಂದು ಮನವಿ‌ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಜಿ.ಬಾಲಾಜಿ, ಲಿಂಗಾರೆಡ್ಡಿ, ಪ್ರದೇಪ್ ರೆಡ್ಡಿ, ರಾಘವರೆಡ್ಡಿ, ಗಾದಿಲಿಂಗ, ಕೊಳಗಲ್ಲು ವೀರೇಶ್, ಈರಪ್ಪ ಮೊದಲಾದವರು ಇದ್ದರು.