ಮತ ಚೀಟಿ ವ್ಯವಸ್ಥೆಗೆ ಡಿಕೆಎಸ್ ಮನವಿ

ಬೆಂಗಳೂರು,ನ.೧೪- ಬಿಹಾರದಲ್ಲಿ ಮತಯಂತ್ರ ದುರ್ಬಳಕೆ ಆರೋಪಗಳು ಕೇಳಿ ಬಂದಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತ ಯಂತ್ರಗಳನ್ನು ರದ್ದು ಮಾಡಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕೆಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಇವಿಎಂ ಯಂತ್ರಗಳನ್ನು ತಯಾರು ಮಾಡಿರುವುದು ಮಾನವರು, ಹೀಗಾಗಿ ಇವಿಎಂ ದುರ್ಬಳಕೆಯ ಸಾಧ್ಯತೆ ಇದೆ. ಹಾಗಾಗಿ ಬ್ಯಾಲೆಟ್ ಪೇಪರೇ ಸರಿಯಾದದ್ದು, ಇವಿಎಂ ಯಂತ್ರಗಳ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿ ಬರುತ್ತಿದ್ದರೂ ಚುನಾವಣಾ ಆಯೋಗ ಮೂಖ ಪ್ರೇಕ್ಷಕರಂತೆ ನಡೆದುಕೊಳ್ಳುತ್ತಿದೆ. ಇದರಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ ಎಂದರು.
ಚುನಾವಣೆಗಳಲ್ಲಿ ಇವಿಎಂ ಬೇಡ ಬ್ಯಾಲೆಟ್ ಪೇಪರ್ ಬಳಸಿ ಎಂಬ ಬಗ್ಗೆ ಎಲ್ಲ ಪಕ್ಷಗಳು ಒತ್ತಾಯಿಸಬೇಕು ಎಂದು ಅವರು ಹೇಳಿದರು.