ಮತ ಚಲಾಯಿಸುವ ಹಕ್ಕನ್ನು ಕಡ್ಡಾಯವಾಗಿ ಚಲಾಯಿಸಿ

ಧಾರವಾಡ,ಏ26: ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ನಿಮ್ಮ ಹಕ್ಕನ್ನು ಚಲಾಯಿಸಬೇಕು ಮತದಾನ ಮಾಡುವದು ಎಲ್ಲರ ಹಕ್ಕಾಗಿದೆ ಎಂದು ಧಾರವಾಡದ ಜಿಲ್ಲಾ ಸ್ವೀಪ್ ಸಮೀತಿ ನೋಡಲ್ ಅಧಿಕಾರಿ ಸ್ವರೂಪ ಟಿ.ಕೆ. ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಲಯ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಕಾವೇರಿ ವಿದ್ಯಾರ್ಥಿನಿಯರ ವಸತಿ ನಿಲಯದ ಸಭಾಂಗಣದಲ್ಲಿ ಆಯೋಜಿಸಿದ ‘ಮತದಾನ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮತದಾನ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಮತದಾನ ಮಾಡಲು ಅರ್ಹ ಪುರುಷ ಮತ್ತು ಮಹಿಳಾ ಮತದಾರರು ಚುಣಾವಣೆಯಲ್ಲಿ ಭಾಗವಹಿಸಿ ಎಂದರು. ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಕೊಳ್ಳಬೇಕು, ಮತದಾನ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾದ್ದು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಸಕ್ರೀಯವಾಗಿ ಪಾಲ್ಗೊಳ್ಳಿ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಗಾಗಿ ‘ಮತದಾನದ ಮಹತ್ವ’ ಎಂಬ ವಿಷಯದ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕವಿವಿ ಎನ್.ಎಸ್.ಎಸ್ ಸಂಯೋಜಕರಾದ ಡಾ. ಎಂ.ಬಿ ದಳಪತಿ ಮಾತನಾಡಿ ಮತದಾನ ಮಾಡುವದು ಎಲ್ಲರ ಜವಾಬ್ದಾರಿ ಆಗಿದ್ದು, ಎಲ್ಲರು ಸ್ವಯಂ ಪ್ರೇರಿತರಾಗಿ ಮತದಾನ ಪಾಲ್ಗೊಳ್ಳಬೇಕು ಎಂದ ಅವರು ವಿದ್ಯಾರ್ಥಿಗಳು ಮತದಾನದ ಕುರಿತು ಬೇರೆಯವರಿಗೆ ಮತದಾನದ ಕುರಿತು ಅರಿವು ಮೂಡಿಸಬೇಕು ಎಂದರು.
ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ಎಮ್.ಎಸ್. ಸಾಳುಂಕೆ ಮಾತನಾಡಿ ಎಲ್ಲರು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಮತದಾನದಲ್ಲಿ ಪಾಲ್ಗೋಳ್ಳಬೇಕು, ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವಾಗಿದೆ ಎಂದ ಅವರು ಮೊದಲ ಸಲ ಮತದಾನ ಮಾಡುವದು ಒಂದು ರೊಮಾಂಚನವನ್ನು ಉಂಟು ಮಾಡುತ್ತದೆ. ಎಲ್ಲರು ನಮ್ಮ ಕರ್ತವ್ಯಗಳನ್ನು ನಿಭಾಯಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪೆÇ್ರ. ಎಸ್. ಕೆ. ಪವಾರ ಮಾತನಾಡಿ ಮತದನಾ ಎಲ್ಲ ಪ್ರಜೆಗಳ ಕರ್ತವ್ಯವಾಗಿದೆ. ಪ್ರಸ್ತುತ ನಗರ ಪ್ರದೇಶಗಳಲ್ಲಿ ಶೇಕಡಾವಾರು ಮತದಾನ ಕಡಿಮೆ ಆಗುತ್ತಿರುವದು ಆತಂಕದ ಸಂಗತಿ ಆಗಿದೆ ಆದ್ದರಿಂದ ಶಿಕ್ಷಿತರು ಮತದಾನ ಪ್ರಕ್ರಿಯೆಲ್ಲಿ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ. ಈರಣ್ಣ ಮುಳಗುಂದ, ವಿದ್ಯಾರ್ಥಿನಿಲಯದ ಕ್ಷೇಮ ಪಾಲಕರಾದ ಡಾ. ಎಸ್. ಅನ್ನಪೂರ್ಣ, ಡಾ. ವಿಜಯಲಕ್ಷ್ಮಿ ಕೆ, ವಿದ್ಯಾರ್ಥಿನಿಯರ ಕಾರ್ಯದರ್ಶಿಗಳಾದ ಅಂಜಲಿ. ಪುಷ್ಪಿತಾರಾಣಿ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.