ಮತ ಚಲಾಯಿಸಿದ ಸೋಂಕಿತರು

೩sm೪

ಬೆಂಗಳೂರು, ನ.೩- ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಕೊರೋನಾ ಸೋಂಕಿತರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.
ನಗರದಲ್ಲಿಂದು ಆರ್‌ಆರ್ ನಗರದ ಕ್ಷೇತ್ರ ವ್ಯಾಪ್ತಿಯಲ್ಲಿನ ೬ಕ್ಕೂ ಅಧಿಕ ಮತಗಟ್ಟೆಗಳಲ್ಲಿ ೩೫ಕ್ಕೂ ಹೆಚ್ಚು ಕೊರೋನಾ ಸೋಂಕಿತ ಮತ ಚಲಾವಣೆ ಮಾಡಿದರು.
ಆರಂಭದಲ್ಲಿಯೇ ಬಿಬಿಎಂಪಿ ಅಧಿಕಾರಿಗಳು ಕೊರೋನಾ ಸೋಂಕಿತರಿಗೆ ಮಾಹಿತಿ ರವಾನಿಸಿ, ಮತಚಲಾಯಿಸಲು ಇಚ್ಛಿಯಿಸುವವರು ಸಂಪರ್ಕಿಸುವಂತೆ ಹೇಳಲಾಗಿತ್ತು.ಅದರಂತೆ, ೩೫ಕ್ಕೂ ಅಧಿಕ ಸೋಂಕಿತರು ಪಿಪಿಇ ಕಿಟ್ ಧರಿಸಿ ಮತದಾನ ಮಾಡಿದರು.