ಚನ್ನಮ್ಮನ ಕಿತ್ತೂರ,ಜೂ9: ರಾಜ್ಯದಲ್ಲಿ ಬಿಜೆಪಿಯವರ ಅಭಿವೃದ್ಧಿ ಕಂಡು ಕಾಂಗ್ರೇಸಿನವರು ನಾವು ಈ ಚುನಾವಣೆಯಲ್ಲಿ ಸೋಲುವುದು ಪಕ್ಕಾ ಎಂದು ತಿಳಿದು ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಹೊರಡಿಸಿ ರಾಜ್ಯ ಜನತೆಯ ಮತ ಕಿತ್ತುಕೊಂಡಿದ್ದಾರೆಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹೇಳಿದರು.
ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ಮುಂಬರುವ ಚುನಾವಣೆಯ ತಯಾರಿ ಕುರಿತು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಮತದಾರರು ನನಗೆ ಹೆಚ್ಚಿಗೆ ಮತ ನೀಡಿದ್ದಾರೆ. ಅದೇ ರೀತಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಜನ ಮನ್ನಣೆ ನೀಡುತ್ತಾರೆಂಬ ವಿಶ್ವಾಸ ನನಗಿದೆ ಇಂದಿನಿಂದಲೇ ಚುನಾವಣೆಯ ಸಿದ್ದತೆ ಆರಂಭ ಎಂದರು.
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ನೆಪದಲ್ಲಿ ಈಗಾಗಲೇ ಹಿಂದಿನ ಬಿಜೆಪಿ ಸರ್ಕಾರದ ಅಭಿವೃದ್ದಿಯಲ್ಲಿದ್ದ ಕೆಲಸಗಳು ಸ್ಥಗಿತಗೊಳ್ಳಬಾರದು ಎಂದು ನಮ್ಮ ನಾಯಕರ ಜೊತೆಗೂಡಿ ಸಿ.ಎಂಗೆ ಪತ್ರ ಬರೆದು ನಿವೇದನೆ ಮಾಡಿಕೊಂಡಿದ್ದೇವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನು ನಿರ್ಣಯ ತೆಗೆದುಕೊಳ್ಳುತ್ತಾರೆಂಬುವುದನ್ನು ಕಾಯೋಣ. ಅದರ ಮೇಲೆ ನಮ್ಮ ಹೋರಾಟ ನಿಶ್ಚಿತವಾಗುತ್ತದೆ ಎಂದರು.
ಐದು ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೇವೆಂದು ಎಲ್ಲೂ ಸಹ ಮುಖ್ಯಮಂತ್ರಿಗಳು ಮಾತನಾಡಿಲ್ಲ. ಈ ಯೋಜನೆಗಳಿಗೆ ಹಣ ಹೇಗೆ ಹೊಂದಿಸುತ್ತಾರೆ. ಇದರಿಂದಾಗಿ ಸರ್ಕರದ ಮೇಲೆ ಜನರು ಸಂಶಯ ಪಡುವಂತಾಗಿದೆ ಎಂದರು.
ಈ ವೇಳೆ ಮಂಡಳಾಧ್ಯಕ್ಷ ಬಸನರಾಜ ಪರವಣ್ಣವರ, ಚಿನ್ನಪ್ಪ ಮುತ್ನಾಳ, ಉಳವಪ್ಪ ಉಳ್ಳಾಗಡಿ, ನಿಂಗನಗೌಡ ಪಾಟೀಲ, ಬಸವರಾಜ ಪುಟ್ಟಿ, ಮಹೇಶ ಹುದಲಿ, ಅಶೋಕ ಹಲ್ಕಿ, ನಿಜಲಿಂಗಯ್ಯಾ ಹಿರೇಮಠ, ಜಗದೀಶ ವಸ್ತ್ರದ, ನ್ಯಾಯವಾದಿ ವ್ಹಿ.ಜಿ. ಬಿಕ್ಕನವರ, ಬಸವರಾಜ ಮಾತನವರ, ಅಪ್ಪಣ್ಣಾ ಪಾಗಾದ, ದಯಾನಂದ ತಲ್ಲೂರ, ಬಸವರಾಜ ಡೂಗನವರ, ಸರಸ್ವತಿ ಹೈಬತ್ತಿ, ಹೇಮಕ್ಕಾ ಬಿಕ್ಕಣ್ಣವರ, ನಾಗಮ್ಮ ಶೆಟ್ಟರ, ಸೇರಿದಂತೆ ಮುಖಂಡರು, ಕಾರ್ಯಕರ್ತರಿದ್ದರು.