ಮತ ಏಣಿಕೆ ಕಾರ್ಯ ಪರಿಶೀಲನೆ

ಬ್ಯಾಡಗಿ,ಏ2: ಪಟ್ಟಣದ ತಾಲೂಕಾ ಕಚೇರಿಯ ಸಭಾಭವನದಲ್ಲಿ ನಡೆದ ಕಾಗಿನೆಲೆ ಹಾಗೂ ತಡಸ ಗ್ರಾಮ ಪಂಚಾಯತಿಗಳ ಚುನಾವಣೆಯ ಮತ ಎಣಿಕೆ ಕಾರ್ಯವನ್ನು ಹಾವೇರಿಯ ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬುಧವಾರ ನಡೆದ ಎರಡು ಗ್ರಾಪಂಗಳ 29ಸ್ಥಾನಗಳ ಮತ ಎಣಿಕೆ ಕಾರ್ಯದಲ್ಲಿ ಕೋವಿಡ್ ನಿಯಮಾನುಸಾರ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲನೆ ನಡೆಸಿ ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ಕೋವಿಡ್ ಮಾರ್ಗಸೂಚಿಯಂತೆ ಅನುಸರಿಸಲು ಹಾಗೂ ಗೆದ್ದ ಅಭ್ಯರ್ಥಿಗಳು ಅನಗತ್ಯ ಗದ್ದಲ, ಮೆರವಣಿಗೆಯನ್ನು ನಡೆಸದಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ರವಿಕುಮಾರ ಕೊರವರ, ಉಪತಹಶೀಲ್ದಾರ ರವಿ ಭೋಗಾರ, ಸೆಕ್ಟರ್ ಆಫೀಸರ್ ಮಹೇಶ ಮರೆಣ್ಣನವರ, ಚುನಾವಣಾ ಶಿರಸ್ತೇದಾರ ಆರ್.ಎಂ.ಮುಗುಳಿ, ಶಿರಸ್ತೇದಾರ ರಾಜಪ್ಪ ಬಂಕಾಪುರ, ಗ್ರಾಪಂಗಳ ಚುನಾವಣಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.