ಮತ ಎಣಿಕೆ, ಫಲಿತಾಂಶಕ್ಕೆ  ಕ್ಷಣಗಣನೆ,ಡಾಕ್ಟರ್ v/s ಲಾಯರ್ ಗೆಲುವು ಯಾರಿಗೆ? ಕೂಡ್ಲಿಗಿಯಲ್ಲಿ ರಾಜಕೀಯ ಲೆಕ್ಕಾಚಾರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮೇ.12 :- ಮತದಾರರು ಈಗಾಗಲೇ ಮೇ 10ರಂದು ಗುಪ್ತವಾಗಿ ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ  ಅಭ್ಯರ್ಥಿಗಳ ಪರೀಕ್ಷೆಯ ಭವಿಷ್ಯ ಬರೆದಾಗಿದೆ ಅದರ ಫಲಿತಾಂಶ  ನಾಳೆ ಹೊರಬೀಳಲು ಸಕಲಸಿದ್ಧತೆ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಮಾಡಲಾಗಿದೆ. 
ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ಅತೀಹೆಚ್ಚು ಹುಣಿಸೆಮರಗಳ ನಾಡು, ವಿಜಯನಗರ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಂದಾಗಿರುವ ನೀರಾವರಿ ಇಲ್ಲದ ಮಳೆಯಾಶ್ರೀತ ಪ್ರದೇಶವಾಗಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಈ ಭಾರಿ ಬುದ್ದಿವಂತರ ರಾಜಕೀಯ ಕಣವಾಗಿದ್ದು ಡಾಕ್ಟರ್ v/s ಲಾಯರ್ ನಡುವಿನ ಜಿದ್ದಾಜಿದ್ದಿ ಕಣದಲ್ಲಿ ಯಾರಿಗಿದೆ ವಿಜಯನಗರದಲ್ಲಿ ವಿಜಯದ ಮಾಲೆ ಎಂಬುದನ್ನು ತಿಳಿಯಲು ಕ್ಷಣಗಣನೆ ಇದ್ದು ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ, ಬೆಟ್ಟಿಂಗ್ ತೆರೆಮರೆಯಲ್ಲಿ ನಡೆಯುತ್ತಿದೆ ಎಂದೇ ಹೇಳಬಹುದಾಗಿದೆ.
 ಕಣ್ಣಿನ ತಜ್ಞ ಅಂಧರ ಬಾಳಿಗೆ ಬೆಳಕು ನೀಡುವ ವೈದ್ಯ ಅಲ್ಲದೆ ಈ ಹಿಂದೆ ಎರಡು ಬಾರಿ ತಂದೆ ದಿ ಎನ್ ಟಿ ಬೊಮ್ಮಣ್ಣ ಶಾಸಕರಾಗಿದ್ದರಿಂದ ಮತ್ತು ಸ್ಥಳೀಯರೆಂಬ ಅಲೆ ಜೋರಾಗಿದ್ದರಿಂದ ಡಾ ಶ್ರೀನಿವಾಸ ಗೆಲುವು ಆಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ ಎನ್ನುತ್ತಾರೆ ಕಾಂಗ್ರೇಸ್ ಮುಖಂಡರು.
ಕಾನೂನು ತಿಳುವಳಿಕೆ ಇರುವ ಕಾನೂನು ಪದವೀಧರ ಜೊತೆಗೆ ಬ್ಯುಸಿನೆಸ್ ನಲ್ಲಿ ಅನುಭವ ಹೊಂದಿರುವ ಲೋಕೇಶ ವಿ ನಾಯಕ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಪರಾಭವಗೊಂಡಿದ್ದವರು ಅಲ್ಲದೆ 10ವರ್ಷದ ಕ್ಷೇತ್ರದಲ್ಲಿ ಜನರೊಂದಿಗೆ ಬೆರೆತಿದ್ದು ತನ್ನದೇ ಆದ ಪ್ರಾಬಲ್ಯ ಹೊಂದಿದ್ದಾರೆ ಈ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು 2008ರಿಂದ ಎರಡು ಬಾರಿ ಬಿಜೆಪಿ ಗೆಲುವು ಕಂಡ ಈ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದು ಈ ಬಾರಿಯೂ ಬಿಜೆಪಿಗೆ ಮತ್ತೊಮ್ಮೆ ಗೆಲುವು ಇದೆ ಎನ್ನುವ ನಿರೀಕ್ಷೆ ಬಿಜೆಪಿ ಪಕ್ಷದ ಮುಖಂಡರದ್ದಾಗಿದೆ.
ಕಲ್ಯಾಣ ಕರ್ನಾಟಕದ ವಿಜಯನಗರ ಜಿಲ್ಲೆಯ ಹೆಬ್ಬಾಗಿಲಾಗಿರುವ ಕೂಡ್ಲಿಗಿ ಕ್ಷೇತ್ರದಲ್ಲಿ ಗೆಲುವಿನ ಮಾಲೆಯ ನಾಯಕ ಯಾರಾಗುತ್ತಾರೆ ಎನ್ನುವುದಕ್ಕೆ ಒಂದು ರಾತ್ರಿ ಬಾಕಿ ಅಷ್ಟೇ ಕ್ಷಣಗಣನೆಯ  ನಿರೀಕ್ಷೆಯಲ್ಲಿ ನಾವು ನೀವೆಲ್ಲರೂ.